ಮುಂದಿನ ತಿಂಗಳಿಂದ ಮುಂಗಡ ರೈಲು ಟಿಕೆಟ್ ಕಾದಿರಿಸುವ ಅವಧಿ ಇಳಿಕೆ

Update: 2024-10-17 15:39 GMT

ಮಂಗಳೂರು, ಅ.17: ರೈಲು ಪ್ರಯಾಣದ ಮುಂಗಡ ಟಿಕೆಟ್ ಕಾದಿರಿಸುವ ಅವಧಿಯನ್ನು 120 ದಿನಗಳಿಂದ 60 ದಿನಗಳಿಗೆ ಇಳಿಸಿ ಕೇಂದ್ರ ರೈಲ್ವೆ ಸಚಿವಾಲಯವು ಆದೇಶ ಹೊರಡಿಸಿದೆ.

ನವೆಂಬರ್ 1ರಿಂದ ಪರಿಷ್ಕೃತ ಆದೇಶ ಜಾರಿಯಾಗಲಿದೆ. 120 ದಿನಗಳ ಮೊದಲು ಮುಂಗಡ ಟಿಕೆಟ್ ಕಾದಿರಿಸುವ ಸೌಲಭ್ಯ ಅಕ್ಟೋಬರ್ 31 ತನಕ ಪ್ರಯಾಣಿಕರಿಗೆ ಲಭ್ಯವಾಗಲಿದೆ. ಆದರೆ ವಿದೇಶಿ ಪ್ರವಾಸಿಗರು 365 ದಿನಗಳು ಮೊದಲು ಮುಂಗಡ ಟಿಕೆಟ್ ಕಾದಿರಿಸುವ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News