ಅ.29ರಂದು ಮುನಿಯಾಲು ಆಯುರ್ವೇದ ಕಾಲೇಜಿನಲ್ಲಿ ರಾಷ್ಟ್ರೀಯ ಆಯುರ್ವೇದ ದಿನಾಚರಣೆ

Update: 2024-10-26 15:52 GMT

ಮಣಿಪಾಲ: ಮಣಿಪಾಲದ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅ.29ರಂದು ಒಂಭತ್ತನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ಇದರ ಅಂಗವಾಗಿ ಆಯುರ್ವೇದ ವಸ್ತುಪ್ರದರ್ಶನ ಮತ್ತು ಮಾಹಿತಿ ಮೇಳವನ್ನು ಬೆಳಗ್ಗೆ 9:30ರಿಂದ ಸಂಜೆ 4 ರವರೆಗೆ ಹಮ್ಮಿಕೊಳ್ಳಲಾಗಿದೆ. ವಸ್ತು ಪ್ರದರ್ಶನದಲ್ಲಿ ಅಂಗಾಂಗಗಳ ರಚನೆ ಮತ್ತು ಕ್ರಿಯೆ, ಔಷಧಿಯ ಸಸ್ಯಗಳು, ವಿವಿಧ ಆಯುರ್ವೇದ ಔಷಧಿಗಳ, ಪಂಚಕರ್ಮ ಚಿಕಿತ್ಸೆ ಮತ್ತು ಇತರ ವಿಷಯಗಳ ಮಾಹಿತಿಯನ್ನು ನೀಡಲಾಗುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News