ಸಹಕಾರಿ ಸಂಘಗಳಿಂದ ಆಧುನಿಕ ವ್ಯವಸ್ಥೆಯೊಂದಿಗೆ ಪಾರದರ್ಶಕ ಸೇವೆ: ಮಂಜುನಾಥ್ ಎಸ್.ಕೆ .

Update: 2024-10-26 15:19 GMT

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಸೌಹಾರ್ದ ಸಹಕಾರಿ ಸಂಘಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲಾ ಸಹಕಾರಿ ಸಂಘಗಳು ಆಧುನಿಕ ವ್ಯವಸ್ಥೆಯೊಂದಿಗೆ ಪಾರದರ್ಶಕ ಸೇವೆ ನೀಡುತ್ತಿದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿಯ ನಿರ್ದೇಶಕ ಮಂಜುನಾಥ್ ಎಸ್.ಕೆ. ಸಾಲಿಗ್ರಾಮ ತಿಳಿಸಿದ್ದಾರೆ.

ಉಡುಪಿ ನಗರ ಮತ್ತು ಉಡುಪಿ ಗ್ರಾಮಾಂತರ ಪ್ರದೇಶಗಳ ಸಹಕಾರಿ ಸಂಸ್ಥೆಗಳಿಗಾಗಿ ಉಡುಪಿ ಜಿಲ್ಕಾ ಸಂಪರ್ಕ ಕಚೇರಿಯಲ್ಲಿ ಶನಿವಾರ ನಡೆದ ವಲಯ ಮಟ್ಟದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಉಡುಪಿ ಜಿಲ್ಲಾ ಸೌಹಾರ್ದ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ.ಎಸ್ ಮಾತನಾಡಿ, ಸೌಹಾರ್ದ ಸಹಕಾರಿಗಳ ನಡೆ ಗುಣ ಮಟ್ಟದ ಕಡೆ ಎಂಬ ಉದ್ದೇಶದಿಂದ ಸೌಹಾರ್ದ ಸಹಕಾರಿಗಳನ್ನು ಕಾರ್ಯನಿರ್ವಹಿಸುತ್ತಿರುವ ತಾಲ್ಲೂಕುಗಳಿಗೆ ಭೇಟಿ ನೀಡಿ ಸ್ಥಳೀಯ ಸಮಸ್ಯೆಗಳ ಕುರಿತು ಚರ್ಚೆ ಮತ್ತು ಪರಿಹಾರ ಕಂಡುಕೊಳ್ಳುವುದು. ಸೌಹಾರ್ದ ಸಹಕಾರಿಗಳ ಆಡಳಿತ ಮಂಡಳಿ, ಸಾಮಾನ್ಯ ಸಭೆ ಮತ್ತು ಕಾಯ್ದೆಯ ಪ್ರಕಾರ ಸೌಹಾರ್ದ ಸಂಯುಕ್ತ ಸಹಕಾರಿಗೆ ಸಲ್ಲಿಸಬೇಕಾದ ಮಾಹಿತಿ ಸಲ್ಲಿಸುವ ಕುರಿತು ಹಾಗು ಸಾಲಗಳ ವಸೂಲಾತಿ ಕುರಿತು ಚರ್ಚಿಸುವುದು ಈ ಸಭೆಯ ಉದ್ದೇಶವಾಗಿದೆ ಎಂದರು.

ಉಡುಪಿ ಜಿಲ್ಲಾ ಸೌಹಾರ್ದ ಒಕ್ಕೂಟದ ಅಧ್ಯಕ್ಷ ಅಂಪಾರು ಜಗನ್ನಾಥ ಶೆಟ್ಟಿ, ಉಪಾಧ್ಯಕ್ಷ ಮಧುಸೂದನ್ ನಾಯಕ್, ನಿರ್ದೇಶಕ ಸುಧೀಶ್ ನಾಯಕ್ ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಸೌಹಾರ್ದ ಒಕ್ಕೂಟದ ಮುಖ್ಯಕಾರ್ಯ ನಿರ್ವಹಣಾ ಧಿಕಾರಿ ಲೋಹಿತ್ ಜಿ.ಸಾಲ್ಯಾನ್ ಸ್ವಾಗತಿಸಿ, ವಂದಿಸಿದರು.

ಸಭೆಯಲ್ಲಿ ಸೌಹಾರ್ದ ಸಹಕಾರಿಗಳು ಆಡಳಿತ ಮಂಡಳಿಯ ಸಭೆ ಮತ್ತು ಸಾಮಾನ್ಯ ಸಭೆ ನಡೆಸುವ ಕ್ರಮಗಳು ಹಾಗೂ ವಿಷಯಗಳು,ಕಾಯ್ದೆ ಕಲಂ 3ರ ಮಾಹಿತಿ ಸಲ್ಲಿಸುವಿಕೆ, ಸಹಕಾರಿಗಳ ಚುನಾವಣೆ ಪೂರ್ವ ಸಿದ್ಧತೆಗಳು ಹಾಗೂ ದಾವಾ ದಾಖಲಾತಿ ವಿಧಾನಗಳ ಕುರಿತು ಮಾಹಿತಿ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News