ಪಂಚಗಂಗಾ ಎಕ್ಸ್‌ಪ್ರೆಸ್ ರೈಲಿಗೆ ಹೆಚ್ಚುವರಿ ಎಸಿ ಬೋಗಿಗಳು ಸೇರ್ಪಡೆ

Update: 2024-10-26 15:50 GMT

ಉಡುಪಿ, ಅ.26: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲು ಅನುಕೂಲವಾಗುವಂತೆ ಕೆಎಸ್‌ಆರ್ ಬೆಂಗಳೂರು- ಕಾರವಾರ- ಕೆಎಸ್‌ಆರ್ ಬೆಂಗಳೂರು ನಡುವೆ ಸಂಚರಿಸುವ ಪಂಚಗಂಗಾ ಎಕ್ಸ್‌ಪ್ರೆಸ್ (16595/596) ರೈಲಿಗೆ ಮೂರು ತ್ರಿಟಯರ್ ಎಸಿ ಬೋಗಿಗಳನ್ನು ಹೆಚ್ಚುವರಿಯಾಗಿ ತಾತ್ಕಾಲಿಕ ನೆಲೆಯಲ್ಲಿ ಸೇರ್ಪಡೆ ಗೊಳಿಸಲು ತೀರ್ಮಾನಿಸಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಬೆಂಗಳೂರು- ಕಾರವಾರ ಪ್ರಯಾಣ ಸಂದರ್ಭ ಅ.28ರಿಂದ 30ರ ತನಕ ಹಾಗೂ ಕಾರವಾರ- ಬೆಂಗಳೂರು ಪ್ರಯಾಣ ಸಂದರ್ಭ ಅ.29ರಿಂದ 31 ವರೆಗೆ ಈ ಹೆಚ್ಚುವರಿ 3 ಎಸಿ ಬೋಗಿ ಸೇವೆಯು ಲಭ್ಯವಾಗಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಈಗ ಒಟ್ಟು 14 ಬೋಗಿಗಳೊಂದಿಗೆ ಸಂಚರಿಸುತಿದ್ದ ಈ ರೈಲು ಮೂರು ದಿನ ಒಟ್ಟು 17 ಬೋಗಿಗಳೊಂದಿಗೆ ಸಂಚರಿಸಲಿದೆ. ರೈಲಿನಲ್ಲಿ ಫಸ್ಟ್ ಎಂಸಿ ಒಂದು, 2ಟಯರ್ ಎಸಿ ಒಂದು, 3ಟಯರ್ ಎಸಿ ಮೂರು, ಏಳು ಸ್ಲೀಪರ್, ಎರಡು ಜನರಲ್, ಒಂದು ಲಗೇಜ್-ಕಮ್-ಬ್ರೇಕ್ ವ್ಯಾನ್ ಮತ್ತು ಒಂದು ಜನರೇಟರ್ ಕಾರ್ (ಒಟ್ಟು 17 ಎಲ್‌ಎಚ್‌ಬಿ) ಬೋಗಿಗಳು ಇರುತ್ತವೆ.

ಅಲ್ಲದೇ ಈ ರೈಲು ಕಾರವಾರ ತಲುಪಿದ ಬಳಿಕ 29ರಿಂದ 31ರವರೆಗೆ ಮಡಗಾಂವ್ ಜಂಕ್ಷನ್‌ವರೆಗೆ ಸಂಚರಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News