ಉಡುಪಿ: ಎಸೆಸೆಲ್ಸಿ ಗಣಿತ ಪರೀಕ್ಷೆಗೆ 78 ಮಂದಿ ಗೈರು
Update: 2025-03-24 23:09 IST
ಸಾಂದರ್ಭಿಕ ಚಿತ್ರ
ಉಡುಪಿ: ಉಡುಪಿ ಜಿಲ್ಲೆಯ 51 ಪರೀಕ್ಷಾ ಕೇಂದ್ರಗಳಲ್ಲಿ ಸೋಮವಾರ ನಡೆದ ಗಣಿತ ಪರೀಕ್ಷೆಗೆ 44 ಬಾಲಕರು ಹಾಗೂ 34 ಬಾಲಕಿಯರು ಸೇರಿದಂತೆ ಒಟ್ಟು 78 ಮಂದಿ ಗೈರುಹಾಜರಾಗಿದ್ದರು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಗಣಪತಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 7264 ಬಾಲಕರು, 6661 ಬಾಲಕಿಯರು ಸೇರಿದಂತೆ ಒಟ್ಟು 13,925 ಮಂದಿ ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದು, ಇವರಲ್ಲಿ 7214 ಬಾಲಕರು ಹಾಗೂ 6627 ಬಾಲಕಿಯರು ಸೇರಿದಂತೆ ಒಟ್ಟು 13,847 ಮಂದಿ ಹಾಜರಾಗಿದ್ದರು ಎಂದು ಡಿಡಿಪಿಐ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಪರೀಕ್ಷೆ ಶಾಂತಿಯುತವಾಗಿ ನಡೆದಿದ್ದು, ಯಾವುದೇ ಅಕ್ರಮ, ಅವ್ಯವಹಾರದ ವರದಿ ಬಂದಿಲ್ಲ ಎಂದು ಅವರು ತಿಳಿಸಿದರು.