ಉಡುಪಿ: ‘ಯುಗಾದಿ ಶುಭಾಶಯಗಳು’ ಮರಳು ಶಿಲ್ಪಾಕೃತಿ
Update: 2025-03-28 20:40 IST
ಉಡುಪಿ: ಹೊಸ ಯುಗದ ಪ್ರಾರಂಭವೆಂದು ಹಿಂದುಗಳು ನಂಬಿರುವ ಚಂದ್ರಮಾನ ಯುಗಾದಿಯನ್ನು ಕರಾವಳಿಯನ್ನು ಹೊರತು ಪಡಿಸಿ ಕರ್ನಾಟಕದ ಹೆಚ್ಚಿನ ಕಡೆಗಳಲ್ಲಿ ಆಚರಿಸುತ್ತಾರೆ. ಕರಾವಳಿ ಭಾಗದಲ್ಲಿ ಸೌರಮಾನ ಯುಗಾದಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಈ ಬಾರಿಯ ಚಾಂದ್ರಮಾನ ಯುಗಾದಿ ನಾಡಿನ ಸಮಸ್ತ ಜನತೆಗೆ ಒಳಿತನ್ನುಂಟು ಮಾಡಲಿ ಎಂಬ ಧ್ಯೇಯದೊಂದಿಗೆ ಶುಭಾಶಯವನ್ನು ಸಾರುವ ಮರಳು ಶಿಲ್ಪವನ್ನು ಸ್ಯಾಂಡ್ ಥೀಂ ಉಡುಪಿ ಕಲಾವಿದರಾದ ಹರೀಶ್ ಸಾಗಾ, ಸಂತೋಷ ಭಟ್ ಹಾಲಾಡಿ ಮತ್ತು ಉಜ್ವಲ್ ನಿಟ್ಟೆಯರು ಕೋಟೇಶ್ವರದ ಹಳೆ ಅಳಿವೆ ಕಡಲ ತೀರದಲ್ಲಿ ರಚಿಸಿದ್ದಾರೆ.
ಹಸಿರು ತಳಿರು ತೋರಣದೊಂದಿಗೆ ಮನೆಗೋಡೆ, ಮರದ ಕಳಸೆಯಲ್ಲಿ ತುಂಬಿರುವ ಅಕ್ಕಿ, ಹರಿವಾಣದಲ್ಲಿ ಬೇವು-ಬೆಲ್ಲ, ಮಾವು, ತೆಂಗಿನಕಾಯಿ, ಸಿಯಾಳದ ಗೊಂಚಲಿನೊಂದಿಗೆ ಈ ಕೃತಿಯು ಯುಗಾದಿ ಹಬ್ಬದ ಶುಭಾಶಯಗಳು ನಾಮಾಂಕಿತದೊಂದಿಗೆ, ಆಕರ್ಷಣೀಯವಾಗಿ ಮೂಡಿ ಬಂದಿದೆ.