ಬೈಕ್ ಢಿಕ್ಕಿ: ವೃದ್ಧೆ ಮೃತ್ಯು
Update: 2025-03-30 21:14 IST

ಕಾರ್ಕಳ, ಮಾ.30: ವೇಗವಾಗಿ ಬಂದ ಮೋಟಾರು ಸೈಕಲ್ ಒಂದು ರಸ್ತೆ ಬದಿ ನಿಂತಿದ್ದ ಮಹಿಳೆಗೆ ಡಿಕ್ಕಿ ಹೊಡೆದು ಆಕೆ ಸ್ಥಳದಲ್ಲೇ ಮೃತ ಪಟ್ಟ ಘಟನೆ ರವಿವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಮಿಯ್ಯಾರು ಗ್ರಾಮದ ಜೋಡುಕಟ್ಟೆ ಕೊಂಕಣ್ ರೆಸಿಡೆನ್ಸಿ ಎದುರು ನಡೆದಿದೆ.
ಮೃತರನ್ನು ಮೇರಿವಾಜ್ (70) ಎಂದು ಗುರುತಿಸಲಾಗಿದೆ. 9:10ರ ಸುಮಾರಿಗೆ ಮೇರಿವಾಜ್ ಕೊಂಕಣ್ ರೆಸಿಡೆನ್ಸಿ ಎದುರು ರಸ್ತೆ ಬದಿಯಲ್ಲಿ ನಿಂತಿದ್ದಾಗ ಸಂತೋಷ್ ಎಂಬಾತ ನಿರ್ಲಕ್ಷ್ಯದಿಂದ ಮೋಟಾರು ಸೈಕಲ್‌ನ್ನು ಚಲಾಯಿಸಿಕೊಂಡು ಬಂದು ಮೇರಿವಾಜ್ ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು. ಸವಾರ ಸಂತೋಷ್‌ಗೂ ಗಾಯವಾಗಿದ್ದು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.