ಎ.5ರಂದು ಪುತ್ತಿಗೆ ವಿದ್ಯಾಪಿಠದ 40ನೇ ವಾರ್ಷಿಕೋತ್ಸವ
ಉಡುಪಿ, ಎ.2: ಹಿರಿಯಡ್ಕ ಪುತ್ತಿಗೆ ವಿದ್ಯಾಪಿಠದ 40ನೇ ವಾರ್ಷಿಕೋತ್ಸವ ಮತ್ತು ಪುತ್ತಿಗೆ ಸುಗುಣ ಸ್ಕೂಲ್‌ನ ಪ್ರಥಮ ವಾರ್ಷಿಕೋತ್ಸವ ಎ.5ರಂದು ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ ಎಂದು ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಮಠದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನ ತಿರ್ಥ ಸ್ವಾಮೀಜಿ ಹಾಗೂ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿಯ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಳಗ್ಗೆ 6.30ಕ್ಕೆ ಪುತ್ತಿಗೆ ಹಿರಿಯ ಸ್ವಾಮೀಜಿ ಪೀಠಾರೋಹಣ ಸುವರ್ಣ ಮಹೋತ್ಸವದ ನಿಮಿತ್ತ ಪುತ್ತಿಗೆ ವಿದ್ಯಾಪಿಠದ ಹಳೆ ವಿದ್ಯಾರ್ಥಿ ಗಳಿಂದ 51 ಕುಂಡಗಳಲ್ಲಿ ವ್ಯಾಸ ಯಾಗ ನಡೆಯಲಿದೆ ಎಂದರು.
ಬೆಳಗ್ಗೆ 10 ಗಂಟೆಗೆ ವಿಪ್ರ ಮಕ್ಕಳಲ್ಲಿ ಧರ್ಮ ಶ್ರದ್ಧೆಯ ಪ್ರವರ್ಧನೆ ಹೇಗೆ ಎಂಬ ವಿಷಯದಲ್ಲಿ ವಿಚಾರ ಗೋಷ್ಠಿ, 11 ಗಂಟೆಗೆ ವಿದ್ಯಾಪಿಠದ 40ನೇ ವಾರ್ಷಿಕೋತ್ಸವ ಸಮಾರಂಭ, ಮಧ್ಯಾಹ್ನ 2ಗಂಟೆಗೆ ಕರಾವಳಿ ಸಂಸತ ಪ್ರತಿಭಾ ಪ್ರದರ್ಶನ, ಸಾಯಂಕಾಲ 4ಗಂಟೆಗೆ ಮಕ್ಕಳಲ್ಲಿ ಸಂಸತ ಮತ್ತು ಸಂಸತಿ ಜಾಗೃತಿ ಬಗ್ಗೆ ಚಿಂತನಮಂಥನ, 5ರಿಂದ 7ರವರೆಗೆ ಪುತ್ತಿಗೆ ಸುಗುಣ ಸ್ಕೂಲ್ ಪ್ರಥಮ ವಾರ್ಷಿಕೋತ್ಸವ, ಸಾಧಕರಿಗೆ ಸನ್ಮಾನ ಮತ್ತು ಚಿಣ್ಣರಿಂದ ವೈವಿಧ್ಯ ಸಾಂಸತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಠದ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ರಮೇಶ್ ಭಟ್, ಸುನೀಲ್ ಆಚಾರ್ಯ, ಪ್ರಮೋದ್ ಉಪಸ್ಥಿತರಿದ್ದರು.