ಕರಿಮಣಿ ಸರ ದರೋಡೆ ಪ್ರಕರಣದ ಆರೋಪಿ ಸೆರೆ: ಕದ್ದ ಮಾಲು ವಶ

Update: 2025-04-03 22:01 IST
ಕರಿಮಣಿ ಸರ ದರೋಡೆ ಪ್ರಕರಣದ ಆರೋಪಿ ಸೆರೆ: ಕದ್ದ ಮಾಲು ವಶ
  • whatsapp icon

ಉಡುಪಿ, ಎ.3: ಮಾ.29ರಂದು ಸಂಜೆ 5:30ರ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ಹೋಗುತಿದ್ದ ಕೆಎಂಸಿ ಆಸ್ಪತ್ರೆಯ ಸಿಬ್ಬಂದಿಯನ್ನು ಹಿಂಬಾಲಿಸಿಕೊಂಡು ಹೋಗಿ ಕುತ್ತಿಗೆಯಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ದರೋಡೆ ಮಾಡಿಕೊಂಡು ಹೋದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಬಂಧಿತನಿಂದ ಕದ್ದ ಮಾಲವನ್ನು ವಶಪಡಿಸಿಕೊಂಡಿದ್ದಾರೆ.

ಸರಳೆಬೆಟ್ಟಿನ ಸಂತೋಷ್(29) ಎಂಬಾತನನ್ನು ಬಂಧಿಸಿ ಆತನಿಂದ ಸುಲಿಗೆ ಮಾಡಿದ ಸುಮಾರು 3.5 ಲಕ್ಷ ರೂ. ಮೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ವಶಪಡಿಸಿಕೊಂಡಿದ್ದಾರೆ. 

ಮನೆಗೆ ತೆರಳುತಿದ್ದ ಮಹಿಳೆಯನ್ನು ಹಿಂಬಾಲಿಸಿಕೊಂಡು ಬಂದ ಆರೋಪಿ ವಾಗ್ಷಾ ಕಾಲೇಜಿನ ಹಿಂಬದಿ ಯಲ್ಲಿ ಆಕೆಯ ಕುತ್ತಿಗೆಗೆ ಕೈಹಾಕಿ 45ಗ್ರಾಂ ತೂಕದ ಚ್ನಿನದ ಕರಿಮಣಿ ಸರವನ್ನು ಸೆಳೆದುಕೊಂಡು ಪರಾರಿ ಯಾಗಿದ್ದ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಆರೋಪಿ ಪತ್ತೆಗೆ ಮಣಿಪಾಲ ಠಾಣೆ ಪಿಐ ದೇವರಾಜ ಟಿವಿ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಶ್ವಾನದಳ ನೀಡಿದ ಸುಳಿವನ್ನು ಆಧರಿಸಿ ಎ.3ರಂದು ಆರೋಪಿತ ಸರಳೆಬೆಟ್ಟಿನ ಸಂತೋಷ್  ಎಂಬಾತನನ್ನು ಬಂಧಿಸಿ ಆತನಿಂದ ಸುಲಿಗೆ ಮಾಡಿದ ಸುಮಾರು 3.5 ಲಕ್ಷ ರೂ. ಮೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News