ಎ.7ರಂದು ಮುನಾವರ್ ಝಮಾ ಮೂಳೂರು ಅಲ್ ಇಹ್ಸಾನಿಗೆ ಭೇಟಿ
Update: 2025-04-06 21:03 IST

ಕಾಪು, ಎ.6: ಡಿಕೆಎಸ್ಸಿ ಅಧೀನದ ಮೂಳೂರು ಅಲ್ ಇಹ್ಸಾನ್ ಸ್ಕೂಲಿನ ಎರಡನೇ ಅಂತಸ್ತಿನ ಉದ್ಘಾಟನಾ ಸಮಾರಂಭ ಎ.7ರಂದು ಬೆ.10ಗಂಟೆಗೆ ನಡೆಯಲಿದ್ದು ಕಾರ್ಯಕ್ರಮಕ್ಕೆ ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿಯ ಮೋಟಿವೇಶನ್ ಸ್ಪೀಕರ್ ಮುನಾವರ್ ಝಮಾ ವಿದ್ಯಾರ್ಥಿಗಳು, ಪೋಷಕರು ಹಾಗೂ ಯುವಜನರ ಕುರಿತು ಪ್ರೇರಣಾ ಭಾಷಣ ಮಾಡಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವ ಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಸ್ಥೆಯ ಜನರಲ್ ಮ್ಯಾನೇಜರ್ ಯು.ಕೆ.ಮುಸ್ತಫಾ ಸಅದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.