ಸರ್ಪು ಸದಾನಂದ ಪಾಟೀಲ್ ನಿಧನ

Update: 2025-04-06 18:03 IST
ಸರ್ಪು ಸದಾನಂದ ಪಾಟೀಲ್ ನಿಧನ
  • whatsapp icon

ಉಡುಪಿ, ಎ.6: ಚೇರ್ಕಾಡಿಯ ಆರ್.ಕೆ.ಪಾಟೀಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 36 ವರ್ಷಗಳ ಕಾಲ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ ಸರ್ಪು ಸದಾನಂದ ಪಾಟೀಲ್(73) ಇಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಬಡಗುತಿಟ್ಟು, ಅದರಲ್ಲೂ ಮುಖ್ಯವಾಗಿ ಬ್ರಹ್ಮಾವರದ ಮಟಪಾಡಿ ಮತ್ತು ಹಾರಾಡಿ ಶೈಲಿಯ ಯಕ್ಷಗಾನದ ಬಗ್ಗೆ ಅತೀವ ಕಾಳಜಿ, ಆಸಕ್ತಿ ಹೊಂದಿದ ಇವರು, ವಿವಿಧ ಕಲಾ ಸಂಘಟನೆಗಳ ಪದಾಧಿಕಾರಿಯಾಗಿ ಕಲೆ, ಕಲಾವಿದರನ್ನು ಪ್ರೋತ್ಸಾಹಿಸುತ್ತ ಬಂದಿದ್ದಾರೆ. ಪಾಟೀಲರು ಪತ್ನಿ, ಪುತ್ರ, ಪುತ್ರಿಯನ್ನು ಹಾಗೂ ಅಪಾರ ಶಿಷ್ಯವೃಂದ ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ.

ಯಕ್ಷಗಾನ ಕಲಾರಂಗದ ಆಜೀವ ಸದಸ್ಯರಾಗಿದ್ದ ಇವರ ನಿಧನಕ್ಕೆ ಅಧ್ಯಕ್ಷ ಎಂ.ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News