ಗಾಂಜಾ ಸೇವನೆ ಆರೋಪ: ನಾಲ್ಕು ಮಂದಿ ಸೆರೆ
Update: 2025-04-06 21:09 IST
ಕೋಟ, ಎ.6: ಗಾಂಜಾ ಸೇವನೆಗೆ ಸಂಬಂಧಿಸಿ ಬೆಳೂರು ಗ್ರಾಮದ ದೇಲಟ್ಟು ಎಂಬಲ್ಲಿ ಎ.4ರಂದು ರಾತ್ರಿ ವೇಳೆ ಗಿಳಿಯಾರು ಗ್ರಾಮದ ರಾಘವೇಂದ್ರ(27) ಹಾಗೂ ಬೇಳೂರು ಗ್ರಾಮದ ಶಿವರಾಜ್ (32) ಎಂಬವರನ್ನು ಕೋಟ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಣಿಪಾಲ: 80ಬಡಗುಬೆಟ್ಟು ಗ್ರಾಮದ ಅರ್ಬಿ ಪಾಲ್ಸ್ ರಸ್ತೆಯಲ್ಲಿ ಮಾ.26ರಂದು ಪರ್ಕಳ ಹೈಸ್ಕೂಲ್ ಸಮೀಪದ ನಿವಾಸಿ ಆದಿತ್ಯ ಪಿ.(20) ಹಾಗೂ ಎ.4ರಂದು ರಾತ್ರಿ ಮಣಿಪಾಲದಲ್ಲಿರುವ ಆರ್‌ಟಿಓ ಕಛೇರಿ ಬಳಿ ಉತ್ತರ ಪ್ರದೇಶ ಮೂಲದ ಹರ್ಷ ಮಿಶ್ರ (20) ಎಂಬವರನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.