ಬಾಲಕ ನಾಪತ್ತೆ

Update: 2025-04-03 19:39 IST
ಬಾಲಕ ನಾಪತ್ತೆ
  • whatsapp icon

ಉಡುಪಿ, ಎ.3: ಬೈಂದೂರು ತಾಲೂಕು ಕೊಲ್ಲೂರು ಗ್ರಾಮದ ಸಲಗೇರಿ ನಿವಾಸಿ ದೇವದತ್ (17) ಎಂಬ ಬಾಲಕ ಒಂಬತ್ತನೇ ತರಗತಿಯಲ್ಲಿ ಅನುತ್ತೀರ್ಣನಾದ ಹಿನ್ನಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಊರಿ ನಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದು, ಮಾರ್ಚ್ 20ರಂದು ಮನೆಗೆ ಬರುವುದಾಗಿ ಹೇಳಿದವನು ಇದೂವರೆಗೂ ಮನೆಗೂ ಬಾರದೇ ಸಂಬಂಧಿಕರ ಮನೆಗೂ ಹೋಗದೇ ನಾಪತ್ತೆಯಾಗಿದ್ದಾನೆ.

5 ಅಡಿ ಎತ್ತರ, ಉರುಟು ಮುಖ, ಎಣ್ಣೆಕಪ್ಪು ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಕನ್ನಡ ಹಾಗೂ ಮಲಯಾಳಂ ಭಾಷೆ ಮಾತನಾಡುತಾನೆ. ಈತನ ಬಗ್ಗೆ ಮಾಹಿತಿ ದೊರೆತಲ್ಲಿ ಕೊಲ್ಲೂರು ಪೊಲೀಸ್ ಠಾಣೆ ದೂ.ಸಂಖ್ಯೆ: 08254-258233, ಮೊ.ನಂ:9480805460,ಬೈಂದೂರು ವೃತ್ತ ನಿರೀಕ್ಷಕರ ಕಚೇರಿ ದೂ.ಸಂಖ್ಯೆ: 08254-251031, ಮೊ.ನಂ:9480805434 ಹಾಗೂ ಕಂಟ್ರೋಲ್ ರೂಂ 100 (0820-2526444)ನ್ನು ಸಂಪರ್ಕಿ ಸಬಹುದು ಎಂದು ಕೊಲ್ಲೂರು ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News