ಬ್ರಹ್ಮಾವರ: ನೀರಿನಲ್ಲಿ ಮುಳುಗಿ ವ್ಯಕ್ತಿ ಮೃತ್ಯು
Update: 2025-03-29 00:08 IST
ಸಾಂದರ್ಭಿಕ ಚಿತ್ರ
ಬ್ರಹ್ಮಾವರ: ಹಳೆ ಕಲ್ಲುಕೋರೆಗೆ ಅಕಸ್ಮಿಕವಾಗಿ ಕಾಲುಜಾರಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಯಡ್ತಾಡಿ ಗ್ರಾಮದ ಅಲ್ತಾರು ಮೇಲಡಿ ಎಂಬಲ್ಲಿ ರಸ್ತೆ ಬದಿಯಲ್ಲಿದ್ದ ಹಳೆ ಕಲ್ಲುಕೋರೆಗೆ ಅಕಸ್ಮಿಕವಾಗಿ ಕಾಲುಜಾರಿ ಬಿದ್ದು ಕಲ್ಲು ಕೋರೆಯಲ್ಲಿ ಸಂಗ್ರಹವಾಗಿದ್ದ ನೀರಿನಲ್ಲಿ ಮುಳುಗಿ ರಾಮದಾಸ (52) ಎಂಬವರು ಮೃತಪಟ್ಟ ಘಟನೆ ಮಾ.27ರಂದು ಅಪರಾಹ್ನ 1:30ರ ಸುಮಾರಿಗೆ ನಡೆದಿದೆ.
ಮೃತರ ಮಾವ ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.