ವೈಜ್ಞಾನಿಕ ಪದ್ಧತಿಯಲ್ಲಿ ಮಲ್ಲಿಗೆ ಕೃಷಿ ಸಮಗ್ರ ಮಾಹಿತಿ ಕಾರ್ಯಕ್ರಮ
ಶಿರ್ವ, ಸೆ.14: ಗ್ರಾಮೀಣ ಹಳ್ಳಿ ಪ್ರದೇಶದ ತೀರಾ ಹಿಂದುಳಿದ ನಾಗರಿಕರಿಗೆ ಜೀವನ ಪದ್ಧತಿಯನ್ನು ಕಲಿಸಿಕೊಡುವ ಮೂಲಕ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಸಹಕಾರಿ ಕ್ಷೇತ್ರ ಭದ್ರ ಬುನಾದಿಯನ್ನು ಒದಗಿಸಿದೆ. ಹುಟ್ಟಿನಿಂದ ಕೊನೆಯ ಕಾಲದವರೆಗೆ ಬೇಕಾದ ಎಲ್ಲಾ ಪೂರಕ ಮಾಹಿತಿಯನ್ನು ಒದಗಿಸಿ ಕೊಡುತತಿದೆ. ಸಮಾಜ ಎದ್ದು ನಿಲ್ಲುವಂತೆ ಮಾಡುವ ಸಾಮರ್ಥ್ಯವನ್ನು ಸಹಕಾರಿ ಕ್ಷೇತ್ರ ಹೊಂದಿದೆ ಎಂದು ಪುತ್ತೂರು ಶ್ರೀಸರಸ್ವತಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಹೇಳಿದ್ದಾರೆ.
ಶ್ರೀಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಶಿರ್ವ ಶಾಖೆಯ 13ನೇ ವರ್ಷದ ಶುಭಾವಸರದಲ್ಲಿ ಮಹಿಳಾ ಕೌಶಲಾಭಿವೃದ್ಧಿ ಯೋಜನೆಯಡಿ ಏರ್ಪಡಿಸಲಾದ ವೈಜ್ಞಾನಿಕ ಪದ್ಧತಿಯಲ್ಲಿ ಮನೆಯಲ್ಲೂ ಮಲ್ಲಿಗೆ ಕೃಷಿ ಸಮಗ್ರ ಮಾಹಿತಿ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಕಾರ್ಯಕ್ರಮವನ್ನು ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ ಉದ್ಘಾಟಿಸಿ ದರು. ಮುಖ್ಯ ಅತಿಥಿಗಳಾಗಿ ಶಿರ್ವ ವಿದ್ಯಾವರ್ಧಕ ಸಂಘ ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ ಶೆಟ್ಟಿ, ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ, ವಿಮಾ ಸಲಹೆಗಾರ ನೋರ್ಬರ್ಟ್ ಮಚಾದೊ ಶಿರ್ವ ಶುಭ ಹಾರೈಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಹಾಗೂ ಮಲ್ಲಿಗೆ ಕೃಷಿ ತಜ್ಞ ಬಂಟಕಲ್ಲು ರಾಮಕೃಷ್ಣ ಶರ್ಮಾ ಮಾತನಾಡಿ, ಮಲ್ಲಿಗೆ ಬೆಳೆಗಾರರು ಸಾಮಾನ್ಯವಾಗಿ ಮಾಡುವ ತಪ್ಪುಗಳಿಂದ ಇಳುವರಿ ಕಡಿಮೆಯಾಗಿ ನಷ್ಟ ವನ್ನು ಅನುಭವಿಸುತ್ತಿದ್ದಾರೆ. ಆಧುನಿಕ ವೈಜ್ಞಾನಿಕ ಪದ್ಧತಿಯಲ್ಲಿ ಮಲ್ಲಿಗೆ ಕೃಷಿಯನ್ನು ಮಾಡಿ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭವನ್ನು ಪಡೆಯಲು ಸಾಧ್ಯ ಎಂದು ತಿಳಿಸಿದರು.
ಶಿರ್ವ ಶಾಖಾ ಪ್ರಬಂಧಕಿ ಸುಧಾ ಪ್ರಭು ಸ್ವಾಗತಿಸಿದರು. ಶಾಖಾ ಸಹಾಯಕ ರಾದ ಭಾರತಿ ಬಿ.ಕಿಶನ್ ಕುಮಾರ್, ಕೌಶಿಕ್ ಸಹಕರಿಸಿದರು. ಬಿಪಿನ್‌ಚಂದ್ರ ವಾಗ್ಲೆ ಪುತ್ತೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.