ಮನೆಗೆ ನುಗ್ಗಿ ನಗ ನಗದು ಕಳವು

Update: 2023-10-26 14:34 GMT

ಬೈಂದೂರು, ಅ.26: ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ನಗ ನಗದು ಕಳವು ಮಾಡಿರುವ ಘಟನೆ ಶಿರೂರು ಗ್ರಾಮದ ಮೊಮಿನ್ ಮೊಹಲ್ಲಾ ಎಂಬಲ್ಲಿ ನಡೆದಿದೆ.

ಮೊಮಿನ್ ಮೊಹಲ್ಲಾ ನಿವಾಸಿ ಶೇಕ್ ಮಹಮ್ಮದ್ ದಸರಾ ರಜೆ ಪ್ರಯುಕ್ತ ಕುಟುಂಬದವರೊಂದಿಗೆ ಅ.14ರಂದು ಮನೆಗೆ ಬೀಗ ಹಾಕಿ ಬೆಂಗಳೂರಿಗೆ ಹೋಗಿದ್ದು, ಅ.26ರಂದು ಬೆಳಗ್ಗೆ ಮನೆಗೆ ವಾಪಾಸ್ಸು ಬಂದು ನೋಡಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ.

ಮನೆಯ ಹಿಂದಿನ ಅಡುಗೆ ಕೋಣೆಯ ಲಾಕ್ ಮುರಿದು ಒಳನುಗ್ಗಿದ ಕಳ್ಳರು, ಕೋಣೆಯ ಕಪಾಟಿನಲ್ಲಿದ್ದ 1,00,000ರೂ. ನಗದು ಹಾಗೂ ಎರಡು ಚಿನ್ನದ ಉಂಗುರಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಇವುಗಳ ಒಟ್ಟು ಮೌಲ್ಯ 1,40,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News