ಪ್ರತ್ಯೇಕ ಪ್ರಕರಣ: ಇಬ್ಬರು ಆತ್ಮಹತ್ಯೆ
Update: 2024-08-12 15:29 GMT
ಗಂಗೊಳ್ಳಿ, ಆ.12: ಅನಾರೋಗ್ಯದಿಂದ ಬಳಲುತಿದ್ದ ಆಳೂರು ಗ್ರಾಮ ಮಾವಿನಗುಳಿ ನಿವಾಸಿ ಸಂಜೀವ(55) ಎಂಬವರು ಜೀವನದಲ್ಲಿ ಜಿಗುಪ್ಸೆ ಹೊಂದಿ ಆ.10ರಂದು ರಾತ್ರಿ ವೇಳೆ ಮನೆಯ ಟಾಯ್ಲೆಟ್‌ನ ಕಬ್ಬಿಣ್ಣದ ಅಡ್ಡೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿರಿಯಡ್ಕ: ಮದ್ಯ ಸೇವನೆ ಚಟದಿಂದ ಕೆಲಸ ಕಾರ್ಯಗಳಿಲ್ಲದೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಅಂಡಾರು ಗ್ರಾಮದ ಸುಧಾಕರ (37) ಎಂಬವರು ಜೀವನದಲ್ಲಿ ಜೀಗುಪ್ಸೆಗೊಂಡು ಆ.11ರಂದು ರಾತ್ರಿ ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.