ಆ.27: ಸಾಲಿಗ್ರಾಮ ಪ.ಪಂಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

Update: 2024-08-23 16:02 GMT

ಉಡುಪಿ, ಆ.23: ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ 10ನೇ ಅವಧಿಗೆ ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ (ಮಹಿಳೆ) ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗ -ಅ (ಮಹಿಳೆ)ಗೆ ರಾಜ್ಯಸರ್ಕಾರದ ಅಧಿಸೂಚನೆಯಂತೆ ಮೀಸಲಿರಿಸಿದ್ದು, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಆಯ್ಕೆಗಾಗಿ ಆ.27 ರಂದು ಅಪರಾಹ್ನ 1:00 ಗಂಟೆಗೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ಕಚೇರಿಯಲ್ಲಿ ಸಭೆಯನ್ನು ಆಯೋಜಿಸಲಾಗಿದೆ.

ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ನಾಮಪತ್ರಗಳನ್ನು ಆ.27ರಂದು ಬೆಳ್ಗಗೆ 9 ಗಂಟೆಯಿಂದ 11ರವರೆಗೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ಕಚೇರಿಯಲ್ಲಿ ಚುನಾವಣೆಗೆ ಸ್ಪರ್ಧಿಸುವ ಕೌನ್ಸಿಲರ್ ಅಥವಾ ಸೂಚಕ ಕೌನ್ಸಿಲರ್ ಚುನಾವಣಾಧಿಕಾರಿಗೆ ಸಲ್ಲಿಸಬಹುದು.

ನಾಮಪತ್ರಗಳ ಪರಿಶೀಲನೆಯನ್ನು ಸಭೆಯ ಪ್ರಾರಂಭದಲ್ಲಿ ನಡೆಸಲಾಗುವುದು. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಅಪೇಕ್ಷಿಸು ವವರು ಅಪರಾಹ್ನ 1:10ರಿಂದ 1:30ರವರೆಗೆ ಚುನಾವಣಾಧಿಕಾರಿಗೆ ಅರ್ಜಿ ಯನ್ನು ಸಲ್ಲಿಸಬಹುದಾಗಿದೆ. ಅಗತ್ಯ ಬಿದ್ದರೆ ಚುನಾವಣಾ ಪ್ರಕ್ರಿಯೆಯು ಮಧ್ಯಾಹ್ನ 1:30ರಿಂದ ಪ್ರಾರಂಭಗೊಳ್ಳಲಿದೆ ಎಂದು ಬ್ರಹ್ಮಾವರ ತಹಶೀಲ್ದಾರ ಕಚೇರಿ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News