ಡಿ.16-17: ಸಮುದಾಯ ಕರ್ನಾಟಕದಿಂದ 8ನೇ ರಾಜ್ಯ ಸಮ್ಮೇಳನ

Update: 2023-10-29 11:28 GMT

ಕುಂದಾಪುರ, ಅ.29: ಸಮುದಾಯ ಕರ್ನಾಟಕ ಸಾಂಸ್ಕೃತಿಕ ಸಂಘಟನೆ ವತಿಯಿಂದ ‘ಘನತೆಯ ಬದುಕು: ಸಾಂಸ್ಕೃತಿಕ ಮಧ್ಯಪ್ರವೇಶ’ ಎಂಬ ಆಶಯ ದೊಂದಿಗೆ 8ನೇ ರಾಜ್ಯ ಸಮ್ಮೇಳನವನ್ನು ಕುಂದಾಪುರದ ವಡೇರಹೋಬಳಿಯ ಆಶೀರ್ವಾದ ಸಭಾಂಗಣ ದಲ್ಲಿ ಡಿ.16 ಮತ್ತು 17ರಂದು ಹಮ್ಮಿಕೊಳ್ಳಲಾಗಿದೆ.

ಡಿ.16ರಂದು ನಡೆಯುವ ಸಮ್ಮೇಳನದ ಉದ್ಘಾಟನಾ ಅಧಿವೇಶನಕ್ಕೆ ದೆಹಲಿ ಜವಾಹರ ಲಾಲ ನೆಹರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ನಿವೃತ್ತ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಪ್ರೊ.ಪುರುಷೋತ್ತಮ ಬಿಳಿಮಲೆ ನೇತೃತ್ವದ ತಾಳಮ  ದ್ದಳೆಯ ಮೂಲಕ ಚಾಲನೆ ನೀಡಲಾಗುವುದು. ಯಕ್ಷಗಾನ ಅರ್ಥಧಾರಿ ಜಬ್ಬಾರ್ ಸಮೋ ಮತ್ತು ಉದಯೋನ್ಮುಖ ಭಾಗವತ ಚಿಂತನಾ ಮಾಳ್ಕೋಡು ತಾಳಮದ್ದಳೆ ಯಲ್ಲಿ ಭಾಗವಹಿಸಲಿರುವರು.

ಸಮುದಾಯ ರಾಜ್ಯ ಸಮಿತಿಯ ಅಧ್ಯಕ್ಷ ಅಚ್ಯುತ ಅಧ್ಯಕ್ಷತೆ ವಹಿಸ ಲಿರುವರು. ಅಪರಾಹ್ನ ಎರಡು ಗೋಷ್ಠಿಗಳು ನಡೆಯ ಲಿದ್ದು, ಘನತೆಯ ಬದುಕು: ಹೋರಾಟದ ಹಾದಿ ಎಂಬ ಮೊದಲ ಗೋಷ್ಠಿಯಲ್ಲಿ ಲಿಂಗತ್ವ ಸಮಾನತೆಯ ಹೋರಾಟಗಾರ ಅಕೈ ಪದ್ಮಶಾಲಿ, ರೈತ ಚಳುವಳಿಯ ರವಿಕಿರಣ ಪೂಣಚ್ಚ, ವಿಜ್ಞಾನ ಚಳುವಳಿಯ ಎಫ್.ಸಿ.ಚೇಗರೆಡ್ಡಿ, ಆದಿವಾಸಿ ಹಕ್ಕು ಗಳ ಹೋರಾಟಗಾರ ಶ್ರೀಧರ ನಾಡಾ, ಮಹಿಳಾ ಚಳುವಳಿಯ ಕೆ.ಎಸ್.ಲಕ್ಷ್ಮೀ ಭಾಗವಹಿಸಲಿದ್ದಾರೆ.

‘ಘನತೆಯ ಬದುಕು: ಕಲೆಯ ಹಾದಿ’ ಎಂಬ ಎರಡನೆಯ ಗೋಷ್ಟಿಯಲ್ಲಿ ಹಾಡುಗಾರ್ತಿ ಎಂ.ಡಿ.ಪಲ್ಲವಿ, ರಂಗ ನಿರ್ದೇಶಕಿ ಮಂಗಳಾ ಎನ್., ಸಿನೇಮಾ ನಿರ್ದೇಶಕ ಮನ್ಸೋರೆ ಭಾಗವಹಿಸಲಿದ್ದಾರೆ. ಡಿ.17ರಂದು ಪ್ರತಿನಿಧಿ ಸಮ್ಮೇಳನ ನಡೆಯ ಲಿದೆ. ಇದರಲ್ಲಿ ಸಮುದಾಯ ರಾಜ್ಯ ಸಮಿತಿಯ ಪ್ರಧಾನ ಕಾರ್ಯ ದರ್ಶಿ ಎಸ್.ದೇವೇಂದ್ರ ಗೌಡ ಮಂಡಿಸಲಿರುವ ವರದಿಯ ಮೇಲೆ ಚರ್ಚೆಗಳು ನಡೆಯಲಿವೆ.

ಇದೇ ಸಂದರ್ಭದಲ್ಲಿ ಹೊಸ ಸಮಿತಿಯ ಆಯ್ಕೆ ನಡೆಯಲಿದೆ. ಸಮ್ಮೇಳನದ ಸಿದ್ಧತೆಗಾಗಿ ಕುಂದಾಪುರ ಸಮುದಾಯದ ನೇತೃತ್ವದಲ್ಲಿ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ. ಸಮ್ಮೇಳನದ ಲಾಂಛನವನ್ನು ರಾಜ್ಯ ಸಮಿತಿ ಅಂತಿಮಗೊಳಿಸಿದ್ದು ಕಲಾವಿದ ಉದಯ ಗಾಂವಕಾರ್ ರಚಿಸಿದ ಸಮ್ಮೇಳನದ ಲೋಗೋವನ್ನು ಸಮುದಾಯದ ಹಿರಿಯ ಸಂಗಾತಿ ಜಿ.ವಿ. ಕಾರಂತ ಬಿಡುಗಡೆಗೊಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News