ಹೊರಗೆ ಬಾರದಂತೆ ಗೃಹ ಬಂಧನ ಆರೋಪ: ಪ್ರಕರಣ ದಾಖಲು
Update: 2025-01-10 16:29 GMT
ಬ್ರಹ್ಮಾವರ, ಜ.10: ಮನೆಯ ಎದುರಿನ ಬಾಗಿಲಿನ ಚಿಲಕವನ್ನು ಹಾಕಿ ಮನೆಯ ಒಳಗಿದ್ದವರನ್ನು ಮನೆಯಿಂದ ಹೊರಗೆ ಬಾರದಂತೆ ಗೃಹ ಬಂಧನದಲ್ಲಿ ಇರಿಸಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಂದಾಡಿ ಗ್ರಾಮದ ಬೇಳೂರು ಜೆಡ್ಡಿನ ಶಿಲಾಮಯ ಬಬ್ಬು ಸ್ವಾಮಿ ದೇವಸ್ಥಾನದ ಸಮೀಪದ ನಿವಾಸಿ ಸುಗುಣ ಮತ್ತು ಅವರ ಮೂರು ಮಕ್ಕಳು ಜ.9ರಂದು ರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ದುಷ್ಕರ್ಮಿಗಳು, ಅಕ್ರಮ ಪ್ರವೇಶ ಮಾಡಿ, ಹೊರಗಿನಿಂದ ಮನೆಯ ಎದುರಿನ ಬಾಗಿಲಿನ ಚಿಲಕವನ್ನು ಹಾಕಿ ಮನೆಯ ಒಳಗಿದ್ದವರನ್ನು ಮನೆಯಿಂದ ಹೊರಗೆ ಬಾರದಂತೆ ಗೃಹ ಬಂಧನದಲ್ಲಿ ಇರಿಸಿರುವುದಾಗಿ ದೂರಲಾಗಿದೆ.