ಬೆಂಗಳೂರು - ಮುರುಡೇಶ್ವರ ಮಧ್ಯೆ ಪ್ರತ್ಯೇಕ ರೈಲಿಗೆ ಆಗ್ರಹ

Update: 2023-09-19 14:39 GMT

ಕುಂದಾಪುರ: ಯುಪಿಎ ಸರಕಾರದ ಅವಧಿಯಲ್ಲಿ ಪ್ರಾರಂಭ ವಾಗಿದ್ದ ಬೆಂಗಳೂರು - ಮೈಸೂರು - ಕಾರವಾರ ರೈಲು, ಬೆಂಗಳೂರು ಮತ್ತು ಕಾರವಾರ ನಡುವೆ ನೇರ ರೈಲು ಪಾರಂಭಗೊಂಡ ನಂತರ ಕರಾವಳಿಗೆ ರದ್ದಾಗಿ ಮಂಗಳೂರು ತನಕ ಸಂಚರಿಸುತ್ತಿತ್ತು.

ಈಗ ಅದೇ ರೈಲು ಮತ್ತೆ ಮುರುಡೇಶ್ವರದ ತನಕ ವಿಸ್ತರಣೆಗೊಂಡಿದೆ. ಈ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಿಸಿದರೆ ಮಾತ್ರ ಕರಾವಳಿ ಜನತೆಗೆ ಅನೂಕೂಲವಾಗಲಿದೆ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರತಿಪಾದಿಸಿದೆ.

ವಾರದಲ್ಲಿ ಆರು ದಿನ ರಾತ್ರಿ 8:15ಕ್ಕೆ ಬೆಂಗಳೂರಿನಿಂದ ಹೊರಡುವ ರೈಲು ಮರುದಿನ ಅಪರಾಹ್ನ 11:54ಕ್ಕೆ ಕುಂದಾಪುರಕ್ಕೆ ಬರಲಿದೆ. ಮತ್ತೆ ಮರು ಪ್ರಯಾಣದಲ್ಲಿ ಅಪರಾಹ್ನ 3:10ಕ್ಕೆ ಕುಂದಾಪುರಕ್ಕೆ ಬಂದು ಮರುದಿನ ಬೆಳಗ್ಗೆ ಬೆಳಗ್ಗೆ 7:15 ಕ್ಕೆ ಬೆಂಗಳೂರು ತಲುಪಲಿದೆ.

ರೈಲಿನ ಈಗಿನ ವೇಳಾಪಟ್ಟಿ ಬೆಂಗಳೂರಿಗೆ ತೆರಳುವ ಕುಂದಾಪುರ ಮತ್ತು ಕರಾವಳಿಗರಿಗೆ ಅನೂಕೂಲವಾಗಿಲ್ಲ. ರಾತ್ರಿ ಹೊರಟು ಬೆಳಿಗ್ಗೆ ಕುಂದಾಪುರ - ಬೆಂಗಳೂರು ತಲುಪುವುದಿದ್ದರೆ ಮಾತ್ರ ಕರಾವಳಿಗರಿಗೆ ಅನೂಕೂಲ. ಪಂಚಗಂಗಾ ಎಕ್ಸಪ್ರೆಸ್ ರೈಲಿನ ಟಿಕೆಟ್ 15 ದಿನಗಳ ಮೊದಲೇ ಬುಕ್ ಆಗುತ್ತಿದೆ.

ಪ್ರಸ್ತುತ ಸಂಚರಿಸುತ್ತಿರುವ ರೈಲನ್ನೇ ಹಿಂದೆ ಇರುವಂತೆ ಮುಂದುವರಿಸಿ ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದಂದು ಹೊಸ ರೈಲು ಪ್ರಾರಂಭವೆಂದು ಬಿಜೆಪಿಗರು ಜನರ ದಿಕ್ಕು ತಪ್ಪಿಸಿ ಸಂಭ್ರಮಿಸುತಿದ್ದಾರೆ. ಜಿಲ್ಲೆಯ ಬಿಜೆಪಿ ಶಾಸಕರಿಗೆ ಮತ್ತು ಜಿಲ್ಲೆಯ ಸಂಸದರಾಗಿ ಕೇಂದ್ರ ಸಚಿವರಾದವರಿಗೆ ಕರ್ತವ್ಯದ ಮೇಲೆ ಬದ್ಧತೆ ಇದ್ದರೇ ವಂದೇ ಮಾತರಂ ಅಥವಾ ಯಾವುದೇ ಒಂದು ಹೊಸ ರೈಲನ್ನು ಕರಾವಳಿಯಿಂದ ಬೆಂಗಳೂರಿಗೆ ಜನರಿಗೆ ಅನುಕೂಲವಾಗುವ ವೇಳಾಪಟ್ಟಿಯಂತೆ ಪ್ರಾರಂಭಿಸಲಿ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News