ರೈಲಿನಲ್ಲಿ ಹಿರಿಯ ನಾಗರಿಕರಿಗೆ ವಿನಾಯತಿ ದರ ನೀಡುವಂತೆ ಆಗ್ರಹ

Update: 2023-11-04 11:23 GMT

File Photo 

ಉಡುಪಿ: ರೈಲು ಪ್ರಯಾಣದಲ್ಲಿ ಹಿರಿಯ ನಾಗರಿಕರಿಗೆ ವಿನಾಯತಿ ದರವನ್ನು ಮರು ಜಾರಿಗೊಳಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತರು ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.

ಭಾರತದ ರೈಲು ಗಾಡಿ ಪ್ರಯಾಣದಲ್ಲಿ ಹಲವು ವರ್ಷಗಳಿಂದ ಹಿರಿಯ ನಾಗರಿಕರಿಗೆ ಪ್ರಯಾಣದ ಟಿಕೇಟು ದರದಲ್ಲಿ ರಿಯಾ ಯತಿ ನೀಡಲಾಗುತ್ತಿತ್ತು. ಕೊರೊನಾದ ತುರ್ತು ಸಂದರ್ಭದಲ್ಲಿ ಕೇಂದ್ರ ಸರಕಾರವು ಹಿರಿಯ ನಾಗರಿಕರಿಗೆ ನೀಡಲಾಗುತ್ತಿದ್ದ ವಿನಾಯಿತಿ ದರವನ್ನು ರದ್ದುಗೊಳಿಸಿ, ಪೂರ್ಣ ಪ್ರಮಾಣದ ಟಿಕೇಟ್ ಪಡೆಯಬೇಕು ಎಂಬ ನಿಯಮ ಜಾರಿಗೊಳಿಸಿತು.

ಈಗ ಕೊರೊನಾ ದೇಶದಿಂದ ದೂರವಾದರೂ ಈವರೆಗೂ ಹಿರಿಯ ನಾಗರಿಕ ರಿಗೆ ವಿನಾಯತಿ ದರದ ಪ್ರಯಾಣ ಟಿಕೇಟ್ ಮರು ಜಾರಿಗೆ ತಂದಿಲ್ಲ. ದೇಶದಲ್ಲಿ ಕೋಟ್ಯಾಂತರ ಬಡ ಹಿರಿಯ ನಾಗರಿಕರಿಗೆ ಅನುಕೂಲವಾಗಿದ್ದ ವಿನಾಯಿತಿ ಪ್ರಯಾಣ ದರದ ಯೋಜನೆ ರದ್ದು ಆಗಿರುವುದರಿಂದ ಹಿರಿಯ ನಾಗರಿಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ತಕ್ಷಣ ಕೇಂದ್ರ ಸರಕಾರವು ರೈಲು ಪ್ರಯಾಣದಲ್ಲಿ ಹಿರಿಯ ನಾಗರಿಕರಿಗೆ ವಿನಾಯತಿ ದರವನ್ನು ಮರು ಜಾರಿಗೊಳಿಸಬೇಕು. ಜನಪ್ರತಿನಿಧಿಗಳು ಈ ಬಗ್ಗೆ ಧ್ವನಿ ಎತ್ತಬೇಕೆಂದು ಉಡುಪಿಯ ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ ಮೇಸ್ತ ಶಿರೂರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News