ಉದ್ಯಮಗಳಲ್ಲಿ ಮಾರುಕಟ್ಟೆ ತಂತ್ರಜ್ಞಾನ ಪರಿಣಾಮಕಾರಿ ಪಾತ್ರ: ಡಾ.ಸೊಕ್ರೆಟ್ಸ್

Update: 2023-09-27 11:49 GMT

ಉಡುಪಿ: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲಿ ಮಾರುಕಟ್ಟೆ ತಂತ್ರಜ್ಞಾನಗಳು ಪರಿಣಾಮಕಾರಿಯಾದ ಪಾತ್ರ ವಹಿಸುತ್ತವೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ಯೋಜನೆಗಳನ್ನು ಸಮಪರ್ಕವಾಗಿ ಅನುಷ್ಠಾನಗೊಳಿಸಬೇಕು. ಇದರಿಂದ ಸೂಕ್ತ ಕೌಶಲ ದೊರೆಯಲು ಸಾಧ್ಯವಿದೆ ಎಂದು ಎಂಎಸ್‌ಎಂಇ ಡಿಎಫ್‌ಓ ಬೆಂಗಳೂರಿನ ಜಂಟಿ ನಿರ್ದೇಶಕ ಡಾ.ಕೆ.ಸೊಕ್ರೆಟ್ಸ್ ಹೇಳಿದ್ದಾರೆ.

ಭಾರತ ಸರಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ, ಎಂಎಸ್‌ಎಂಇ ಕಚೇರಿ ಮಂಗಳೂರು ಆಶ್ರಯ ದಲ್ಲಿ ಉಡುಪಿ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ವತಿಯಿಂದ ಉಡುಪಿಯ ಓಶಿಯನ್ ಪಲ್ಸ್ ಹೊಟೇಲ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾದ ಪ್ಯಾಕೇಜಿಂಗ್ ಟೆಕ್ನಾಲಜಿ ಬಗ್ಗೆ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಮೆಟ್ರೋನಗರ ಹಾಗೂ ಇತರ ಕಡೆಗಳಲ್ಲಿ ವಸ್ತುಗಳನ್ನು ಸಾಗಾಟ ಮಾಡಲು ಬಹಳಷ್ಟು ಪರಿಶ್ರಮದ ಅಗತ್ಯವಿರುತ್ತದೆ. ಉದ್ಯಮಿಗಳು ಹೊಸ ಅನ್ವೇಷಣೆಗಳನ್ನು ಇದಕ್ಕಾಗಿ ಉಪಯೋಗಿಸಿಕೊಳ್ಳಬೇಕು. ವಿವಿಧ ಮಾರುಕಟ್ಟೆ ಕೌಶಲಗಳನ್ನು ಅರ್ಥೈಸಿಕೊಂಡು ಅದನ್ನು ನಮ್ಮ ವ್ಯಾಪಾರ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಎಂಎಸ್‌ಎಂಇಯ ಹರೀಶ್ ಕುಂದರ್ ಉಪಸ್ಥಿತರಿದ್ದರು. ಎಂಎಸ್‌ಎಂಇ ಮಂಗಳೂರಿನ ಜಂಟಿ ನಿರ್ದೇಶಕ ದೇವರಾಜ್ ಕೆ. ಸ್ವಾಗತಿಸಿದರು. ಎಂಎಸ್‌ಎಂಇ ಸಹಾಯಕ ನಿರ್ದೇಶಕ ಸುಂದರ ಶೇರಿಗಾರ ಎಂ. ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News