ಉಡುಪಿ ಜಿಲ್ಲೆಯ 18 ಕಡೆಗಳಲ್ಲಿ ಫಿಸಿಯೋಥೆರಪಿ ಕೇಂದ್ರ ಸ್ಥಾಪನೆ: ಡಾ.ನಾಗಭೂಷಣ ಉಡುಪ

Update: 2023-10-16 16:17 GMT

ಕುಂದಾಪುರ, ಅ.16: ವಿಕಲಚೇತನರಿಗೆ ಫಿಸಿಯೋಥೆರಪಿ ಮಾಡಲು ಅನು ಕೂಲವಾಗುವಂತೆ ಉಡುಪಿ ಜಿಲ್ಲೆಯ 18 ಕಡೆಗಳಲ್ಲಿ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಈವರೆಗೆ ತಲಶ್ಶೇಮಿಯಾಕ್ಕೆ ಬೆಂಗಳೂರಿನಲ್ಲಿ ಮಾತ್ರ ತಪಾ ಸಣೆ ನಡೆಸಲಾಗುತ್ತಿತ್ತು. ಈಗ ಮಣಿಪಾಲದ ಕೆಎಂಸಿ ಜೊತೆ ಮಾತುಕತೆ ನಡೆಸಿದ್ದು ಇಲ್ಲಿಯೂ ತಪಾಸಣೆಗೆ ನಡೆಸಬಹು ದಾಗಿದೆ ಎಂದು ಉಡುಪಿ ಜಿಲ್ಲಾ ಕುಟುಂಊ ಕಲ್ಯಾಣ ಮತ್ತು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ ಹೇಳಿದ್ದಾರೆ.

ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ಕುಂದಾಪುರ ಹಾಗೂ ಬೈಂದೂರು ಕ್ಷೇತ್ರದ ಅಂಗವೈಕಲ್ಯ ಇರುವ ಮಕ್ಕಳ ಪಾಲಕರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡುತಿದ್ದರು.

ಅಂಗವಿಕಲರನ್ನು ಚಿಕಿತ್ಸೆಗೆ, ತಪಾಸಣೆಗೆ ಕರೆತರಲು 108 ಅಂಬುಲೆನ್ಸ್ ಸೌಲಭ್ಯ ಬಳಸಿ ಕೊಳ್ಳಬಹುದು. ಈ ಬಗ್ಗೆ ಸೂಚನೆ ನೀಡಲಾಗಿದೆ. ಎಂಡೋ ಬಾಧಿತರು ಯಾವುದೇ ಖಾಸಗಿ ವೈದ್ಯರು, ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿ ದರೂ ಬಿಲ್‌ಗೆ ಸರಕಾರಿ ಆಸ್ಪತ್ರೆ ವೈದ್ಯರ ಬಳಿ ದೃಢೀಕರಣ ಪಡೆದರೆ ಅದನ್ನು ಸರಕಾರದಿಂದ ಪಾವತಿಸಲಾಗುವುದು ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರೇಮಾನಂದ, ಅಂಗವಿಕಲ ಮಕ್ಕಳಿಗೆ ಅಗತ್ಯವಿರುವ ಔಷಧಗಳ ಚೀಟಿಯಲ್ಲಿ ಜೆನೆರಿಕ್ ಹೆಸರು ಬರೆಸಿದರೆ ಅಂತಹ ಔಷಧಗಳನ್ನು ಸರಕಾರಿ ಆಸ್ಪತ್ರೆಯಿಂದ ನೀಡಲಾಗುತ್ತದೆ. ಲಭ್ಯವಿಲ್ಲದಿದ್ದರೆ ಖರೀದಿಸಿ ನೀಡಲು ಅವಕಾಶ ಇದೆ ಎಂದರು.

ಕಡತಗಳ ಶೀಘ್ರ ವಿಲೇವಾರಿ

ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಅಂಗವಿಕಲರ ಪ್ರಮಾಣಪತ್ರ, ಮಾಸಾಶನ, ಚಿಕಿತ್ಸೆ, ತಪಾಸಣೆ ಸೇರಿದಂತೆ ಯಾವುದೇ ವಿಷಯದ ಕುರಿತು ಅಧಿಕಾರಿಗಳು ನಿರ್ಲಕ್ಷ್ಯ, ಅಸಡ್ಡೆ ಮಾಡಬಾರದು. ಅಂಗ ವಿಕಲರಿಗೆ ಸಂಬಂಧಪಟ್ಟ ಕಡತಗಳ ವಿಲೇವಾರಿ ಶೀಘ್ರಗತಿಯಲ್ಲಿ ನಡೆಯಬೇಕು ಎಂದು ಹೇಳಿದ್ದಾರೆ.

ಯಾವುದೇ ಲೋಪದಿಂದ ಸರಕಾರಿ ವ್ಯವಸ್ಥೆಯಲ್ಲಿ ಕೆಲವು ಅರ್ಹರಿಗೆ ಸೌಲಭ್ಯ ದೊರೆಯದಂತಾಗಬಾರದು. ಜಿಲ್ಲಾ ಅಂಗವಿಕಲ ಪುನರ್ವಸತಿ ಕೇಂದ್ರ ಮೂಲಕ ನೀಡುತ್ತಿದ್ದ ಚಿಕಿತ್ಸೆಯನ್ನು ಮುಂದುವರಿಸಬೇಕು. ಥೆರಫಿ ಸೆಂಟರ್‌ನಲ್ಲಿ ಸಮಯ ನಿಗಧಿ ಮಾಡಿಕೊಂಡು ಕೆಲಸ ಮಾಡಬೇಕು. ದೂರದಿಂದ ಬರುವವರಿಗೆ ವೈದ್ಯರಿಲ್ಲ ಎಂದು ಎನ್ನುವಂತಾಗ ಬಾರದು. ಆರೋಗ್ಯ, ಶಿಕ್ಷಣ ವಿಕಲಚೇತನ ಇಲಾಖೆ ಸಭೆ ನಡೆಸಿ, ಅಂಗವಿಕಲ ಮಕ್ಕಳ ಸಮಸ್ಯೆ ಪರಿಹಾರ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದರು.

ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಬೈಂದೂರು ಕ್ಷೇತ್ರದಲ್ಲಿ ಅಂಗವಿಕಲರು ಇರುವ ಎರಡು ಮನೆಗಳಿಗೆ ಹೊಳೆ ದಾಟಲು ಸಮಸ್ಯೆ ಅನುಭವಿಸುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ಅಲ್ಲಿಗೆ ಸೇತುವೆ ನಿರ್ಮಾಣಕ್ಕೆ ಪ್ರಯತ್ನ ನಡೆದಿದೆ ಎಂದು ತಿಳಿಸಿದರು.

ಕುಂದಾಪುರ ತಾಪಂ ಕಾರ್ಯನಿರ್ವಹಣಾಧಿಕಾರಿ ಶಶಿಧರ್, ಬೈಂದೂರು ತಾಪಂ ಕಾರ್ಯನಿರ್ವಹಣಾಧಿಕಾರಿ ಭಾರತಿ, ಜಿಲ್ಲಾ ಅಂಗವಿಕಲ ಪುನರ್ವಸತಿ ಕೇಂದ್ರದ ನಿರ್ದೇಶಕಿ ರತ್ನಾ, ವಿಕಲಚೇತನ ಇಲಾಖೆ ಉಪನಿರ್ದೇಶಕಿ ಶ್ಯಾಮಲಾ, ಬಸ್ರೂರು ಗ್ರಾಪಂ ಉಪಾಧ್ಯಕ್ಷೆ ಭಾಗೀರಥಿ ಉಪಸ್ಥಿತರಿದ್ದರು. ಸಿಡಬ್ಲ್ಯುಸಿಯ ಶ್ರೀನಿವಾಸ ಗಾಣಿಗ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮ ಸಂಯೋಜಕಿ ಕೃಪಾ ಭಟ್ ವಿಕಲಚೇತನ ಮಕ್ಕಳ ವಿವರ ನೀಡಿದರು.

ಪ್ರಮುಖ ಬೇಡಿಕೆಗಳ ಮಂಡನೆ

ಅಂಗವಿಕಲತೆಗೆ ಅನುಗುಣವಾಗಿ ಮಾಶಾಸನ ಹೆಚ್ಚಳ, ಅಂಗವೈಫಲ್ಯತೆ ಮಕ್ಕಳಿಗೆ ಉಚಿತ ಪ್ಯಾಡ್ ವಿತರಣೆ, ವಿಶೇಷ ಮಕ್ಕಳಿಗೆ ವಿಶೇಷ ಬಜೆಟ್ ಮಂಡನೆ, ವಿಕಲಚೇತನ ಮಕ್ಕಳಿಗೆ ಮನೆಯಲ್ಲೇ ತರಬೇತಿ ಶಿಕ್ಷಣ, ಆನ್‌ಲೈನ್ ಮೂಲಕ ಶಿಕ್ಷಣ ತರಬೇತಿ ನೀಡಬೇಕು.

ಥೆರಫಿ ಇರುವ ಮಕ್ಕಳ ಮನೆಗೆ ಹೋಗಿ ಥೆರಫಿ ಚಿಕಿತ್ಸೆ ನೀಡಬೇಕು. ಅಂಗವಿಕಲ ಮಕ್ಕಳಿಗೆ ವಿವಿಧ ನಮೂನೆ ಥೆರಫಿ ಅವಶ್ಯವಿದ್ದು, ಗ್ರಾಮ ಮಟ್ಟದಲ್ಲಿ ಥೆರಫಿ ಸೆಂಟರ್ ತೆರೆಯಬೇಕು. ಅಲ್ಲದೆ ಪೌಷ್ಟಿಕ ಆಹಾರ ಪೂರೈಕೆ, ನಿರಾಮಯ ವಿಮಾ ಯೋಜನೆ ಮೊತ್ತ ಹೆಚ್ಚಳ, ಎಪಿಎಲ್ ಮಕ್ಕಳಿಗೂ ವೇತನ ನೀಡಬೇಕು ಎಂಬ ಬೇಡಿಕೆಗಳನ್ನು ಸಭೆಯಲ್ಲಿ ಮಂಡಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News