ಗಂಗೊಳ್ಳಿ ತೌಹೀದ್ ಮಹಿಳಾ ಕಾಲೇಜು: ಬಿಕಾಂ ಪರೀಕ್ಷೆಯಲ್ಲಿ ಶೇ.96 ಫಲಿತಾಂಶ

Update: 2023-09-04 15:20 GMT

 ಮುಸ್ಕಾನ್ ಎಂ.ಎಚ್., ಫಾತಿಮಾ, ಮುಸ್ಕಾನ್ ಎ.ಎಚ್

ಉಡುಪಿ, ಸೆ.4: ಗಂಗೊಳ್ಳಿ ತೌಹೀದ್ ಮಹಿಳಾ ಪದವಿ ಕಾಲೇಜು ಅಂತಿಮ ವರ್ಷ ಬಿಕಾಂ ವಿಭಾಗದಲ್ಲಿ ಶೇ.96ರಷ್ಟು ಫಲಿತಾಂಶ ಪಡೆದಿದೆ.

ಒಟ್ಟು 24 ವಿದ್ಯಾರ್ಥಿಗಳ ಪೈಕಿ 23 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಉನ್ನತ ಶ್ರೇಣಿಯಲ್ಲಿ 16 ಮತ್ತು ಪ್ರಥಮ ದರ್ಜೆಯಲ್ಲಿ 5 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಮಸ್ಕಾನ್ ಎಂ.ಎಚ್. 869(ಶೇ.96.55), ಫಾತಿಮಾ ಜಿನಾನ್ 846(ಶೇ.94), ಮುಸ್ಕಾನ್ ಎ.ಎಚ್. 796(ಶೇ.88) ಅಂಕಗಳನ್ನು ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News