ಹಕ್ಲಾಡಿ: ಬಾಲಕ ನಾಪತ್ತೆ

Update: 2023-10-20 14:16 GMT

ಉಡುಪಿ, ಅ.20: ಕುಂದಾಪುರ ತಾಲೂಕು ಹಕ್ಲಾಡಿ ಗ್ರಾಮದ ಕಟ್ಟಿನಮಕ್ಕಿ ನಿವಾಸಿ ಅರುಣ (15) ಎಂಬ ಬಾಲಕನು ಸೆ.20ರಂದು ಅಪರಾಹ್ನ 3:30ರ ಸುಮಾರಿಗೆ ಮನೆಯಿಂದ ಹೊರಗೆ ಹೋದವನು ವಾಪಾಸು ಬಾರದೇ ನಾಪತ್ತೆ ಯಾಗಿದ್ದಾನೆ.

5 ಅಡಿ ಎತ್ತರ, ಎಣ್ಣೆ ಕಪ್ಪು ಮೈಬಣ್ಣ ಹೊಂದಿದ್ದು, ಈತನ ಬಗ್ಗೆ ಮಾಹಿತಿ ದೊರೆತಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆ ದೂ.ಸಂಖ್ಯೆ: 08254-265333, ಮೊ.ನಂ: 9480805457ಅನ್ನು ಸಂಪರ್ಕಿಸಬಹುದು ಎಂದು ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News