ಕೋಡಿ ಬ್ಯಾರೀಸ್ ಕಾಲೇಜಿನಲ್ಲಿ ಸಿಎ ಫೌಂಡೇಶನ್ ಕೋರ್ಸ್ ಉದ್ಘಾಟನೆ

Update: 2024-08-29 15:19 GMT

ಕುಂದಾಪುರ: ಕೋಡಿ ಬ್ಯಾರೀಸ್ ಪದವಿ ಪೂರ್ವ ಕಾಲೇಜು ಹಾಗೂ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜುಗಳ ಜಂಟಿ ಆಶ್ರಯ ದಲ್ಲಿ ಹಮ್ಮಿಕೊಳ್ಳಲಾದ ಸಿಎ ಫೌಂಡೇಶನ್ ಕೋರ್ಸ್‌ನ್ನು ಐ.ಸಿ.ಎ.ಐ ಉಡುಪಿ ಶಾಖೆಯ ಲೆಕ್ಕಪರಿ ಶೋಧಕ ಹಾಗೂ ವೃತ್ತಿ ಸಲಹೆಗಾರ ಸಿಎ ವಸಂತ್ ಶಾನುಭೋಗ್ ಕುಂದಾಪುರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ವ್ಯಕ್ತಿ ಸ್ವಾರ್ಥಿಯಾಗದೇ ಸಮಾಜಕ್ಕೆ ಸಹಾಯ ಹಸ್ತವಾಗಿರಬೇಕು. ಆತ ತನಗಾಗಿ ಅಲ್ಲವಾ ದರೂ ತನ್ನ ಕುಟುಂಬಕ್ಕಾಗಿ ಬಹು ದೊಡ್ಡ ಗುರಿಯೊಂದನ್ನು ಮುಂದಿರಿಸಿಕೊಂಡು ಸಿಎ ಆಗಲೇಬೇಕು. ಭಾರತದಲ್ಲಿ ಸಿಎ ವೃತ್ತಿಗೆ ಅತೀವ ಬೇಡಿಕೆಯಿದ್ದು ಇನ್ನೂ ಹೆಚ್ಚಿನ ಲೆಕ್ಕಪರಿಶೋಧಕರು ಸಮಾಜಕ್ಕೆ ಬೇಕಾಗಿದ್ದಾರೆ ಎಂದು ಹೇಳಿದರು.

ಬ್ಯಾರೀಸ್ ವಿಶ್ವಸ್ಥ ಮಂಡಳಿ ಸದಸ್ಯ ಡಾ.ಆಸೀಫ್ ಬ್ಯಾರಿ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಕೆ.ಎಂ ಅಬ್ದುಲ್ ರೆಹಮಾನ್ ಬ್ಯಾರಿ ವಹಿಸಿದ್ದರು. ಪಿಯು ಕಾಲೇಜಿನ ಪ್ರಾಂಶುಪಾಲೆ ಅಶ್ವಿನಿ ಶೆಟ್ಟಿ, ಪದವಿ ಕಾಲೇಜಿನ ಪ್ರಾಂಶುಪಾಲೆ ಶಬೀನಾ ಎಚ್., ಬಿ.ಎಡ್ ಕಾಲೇಜಿನ ಪ್ರಾಂಶುಪಾಲ ಸಿದ್ದಪ್ಪಕೆ.ಎಸ್., ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಪೂರ್ಣಿಮಾ ಟಿ., ಸಿಎ ವಿದ್ಯಾರ್ಥಿಗಳಾದ ರಾಹುಲ್ ಮತ್ತು ಶ್ರೇಯಾ ಶೆಟ್ಟಿ ಉಪಸ್ಥಿತರಿದ್ದರು.

ವಾಣಿಜ್ಯ ಉಪನ್ಯಾಸಕಿ ಶ್ವೇತಾ ಸ್ವಾಗತಿಸಿದರು. ಸಂಖ್ಯಾಶಾಸ್ತ್ರ ಉಪನ್ಯಾಸಕಿ ಸುಂಗಂಧಿ ವಂದಿಸಿದರು. ಕನ್ನಡ ಉಪನ್ಯಾಸಕ ಡಾ.ಸಂದೀಪ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News