ಇಂದ್ರಾಳಿ: ಆಯತಪ್ಪಿ ರೈಲಿನಿಂದ ಬಿದ್ದ ವೈದ್ಯಕೀಯ ವಿದ್ಯಾರ್ಥಿನಿ; ಆಸ್ಪತ್ರೆಗೆ ದಾಖಲು
Update: 2024-09-07 07:01 GMT
ಉಡುಪಿ: ರೈಲಿನಿಂದ ಇಳಿಯುವಾಗ ಆಯತಪ್ಪಿ ಬಿದ್ದು ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರ ಕೈಮುರಿತಕ್ಕೊಳಗಾದ ಘಟನೆ ಇಂದ್ರಾಳಿಯ ರೈಲು ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ವಿದ್ಯಾರ್ಥಿನಿಯನ್ನು ಕೇರಳ ಪಾಲಕ್ಕಾಡಿನ ಅನುಶ್ರೀ ಬಿ. (22) ಎಂದು ಗುರುತಿಸಲಾಗಿದೆ. ನಿದ್ದೆಯ ಮಂಪರಿನಲ್ಲಿದ್ದ ವಿದ್ಯಾರ್ಥಿನಿಯು ರೈಲು ನಿಲುಗಡೆ ನೀಡಲು ನಿಧಾನಗತಿಯಲ್ಲಿ ಚಲಿಸುತ್ತಿರುವಾಗ ಇಳಿದಿದ್ದರಿಂದ ಅವಘಡ ಸಂಭವಿಸಿತೆಂದು ತಿಳಿದುಬಂದಿದೆ.
ಕೂಡಲೇ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಗಾಯಾಳು ವಿದ್ಯಾರ್ಥಿನಿಯನ್ನು ಅಜ್ಜರಕಾಡಿನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಕಾರ್ಯಾಚರಣೆಗೆ ರೈಲ್ವೆ ಮಹಿಳಾ ಆರ್ ಪಿ. ಎಫ್ ಸಹಕರಿಸಿದ್ದಾರೆ.