ಕಾರಿನ ಗಾಜು ಒಡೆದು ಮೊಬೈಲ್, ನಗದು ಕಳವು

Update: 2025-01-15 15:42 GMT

ಮಲ್ಪೆ, ಜ.15: ಮಲ್ಪೆ ಬೀಚ್‌ಗೆ ತೆರಳಿದ್ದ ವಿಹಾರಿಗಳ ಕಾರಿನ ಗಾಜು ಒಡೆದು ಮೊಬೈಲ್ ನಗದು ಕಳವು ಮಾಡಿರುವ ಘಟನೆ ಜ.14ರಂದು ಸಂಜೆ ವೇಳೆ ಮಲ್ಪೆಗಾಂಧಿ ಶತಾಬ್ದಿ ಶಾಲೆಯ ಮೈದಾನದಲ್ಲಿ ನಡೆದಿದೆ.

ಕುಕ್ಕಿಕಟ್ಟೆಯ ರುಖಿಯಾ ಎಂಬವರು ಕಾರನ್ನು ನಿಲ್ಲಿಸಿ ಬೀಚ್‌ಗೆ ಹೋಗಿದ್ದು, ಈ ವೇಳೆ ಕಳ್ಳರು, ಕಾರಿನ ಗಾಜು ಒಡೆದು ಒಳಗೆ ಬ್ಯಾಗ್‌ನಲ್ಲಿದ್ದ ಮೊಬೈಲ್ ಹಾಗೂ 20ಸಾವಿರ ರೂ. ನಗದು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News