ಇಕೋ ಟೂರಿಸಂ ಕುರಿತು ರಾಷ್ಟ್ರೀಯ ಸಮ್ಮೇಳನ

Update: 2025-01-15 15:03 GMT

ಉಡುಪಿ, ಜ.15: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ವತಿಯಿಂದ ‘ಇಕೋ ಟೂರಿಸಮ್ ಹಾರ್ನೆಸ್ಸಿಂಗ್ ಟ್ರಾವೆಲ್ ಟು ಡಿಸ್ಕವರ್ ನೇಚರ್, ಪ್ರಮೋಟ್ ಕನ್ಸರ್‌ವೇಶನ್ ಅಂಡ್ ಸಪೋರ್ಟ್ ಸಸ್ಟೇನಬಲ್ ಡೆವಲಪ್‌ಮೆಂಟ್’ ವಿಷಯದ ಮೇಲೆ ಮುಂದಿನ ಫೆ.19ರಿಂದ 21ರವರೆಗೆ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಅಕಾಡೆಮಿ ಬೆಂಗಳೂರಿನ ಜಿ.ಕೆ.ವಿ.ಕೆ ಆವರಣದ ಪ್ರೊ.ಯು.ಆರ್.ರಾವ್ ವಿಜ್ಞಾನ ಭವನದಲ್ಲಿ ಆಯೋಜಿಸಿದೆ.

ಸಮ್ಮೇಳನದಲ್ಲಿ ವಿವಿಧ ಪ್ರತಿಷ್ಠಿತ ಸಂಸ್ಥೆಗಳ ಹೆಸರಾಂತ ವಿಜ್ಞಾನಿಗಳು ತಾಂತ್ರಿಕ ಉಪನ್ಯಾಸಗಳನ್ನು ನೀಡಲಿದ್ದು, ಸಮ್ಮೇಳನದಲ್ಲಿ ಯುವ ವಿಜ್ಞಾನಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಸಂಶೋಧನಾ ವರದಿಗಳನ್ನು ಮಂಡಿಸಲು ಅವಕಾಶ ಕಲ್ಪಿಸಲಾಗುವುದು. ಆಯ್ಕೆಯಾದ ಸಂಶಓಧನಾ ಪ್ರಬಂಧಗಳಿಗೆ ನಗದು ಬಹುಮಾನವನ್ನು ಸಹ ನೀಡಲಾಗುವುದು.

ಸಮ್ಮೇಳನದಲ್ಲಿ ಸ್ನಾತಕೋತ್ತರ ವಿಜ್ಞಾನ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಯುವ ವಿಜ್ಞಾನಿಗಳು, ಶೈಕ್ಷಣಿಕ ತಜ್ಞರು, ಯುವ ಉದ್ಯಮದಾರರು ಭಾಗವಹಿಸಬಹುದಾಗಿದ್ದು, ಆಸಕ್ತ ಪ್ರತಿನಿಧಿಗಳು ಫೆಬ್ರವರಿ 12ರೊಳಗೆ ಗೂಗಲ್ ಫಾರ್ಮ್ ಮೂವರ ಹೆಸರು ನೋದಾಯಿಸಿ ಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಆಕಾಡೆಮಿಯ ಅಧಿಕಾರಿಗಳನ್ನು ಮೊ.ನಂ: 9845258894, 9686449019 ಹಾಗೂ 9620767819ಅಥವಾ ಅಕಾಡೆಮಿಯ ವೆಬ್‌ಸೈಟ್ - https://kstacademy.in-ನ್ನು ಸಂಪರ್ಕಿ ಸಬಹುದು ಎಂದು ಅಕಾಡೆಮಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News