ಗಂಡನ ಕಿರುಕುಳ ಆರೋಪ: ಪತ್ನಿ ಆತ್ಮಹತ್ಯೆ

Update: 2025-01-15 15:39 GMT

ಬೈಂದೂರು, ಜ.15: ಇಲ್ಲಿನ ಗಂಗಾನಾಡು ಎಂಬಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಪತಿ ಕಿರುಕುಳವೇ ಆತ್ಮಹತ್ಯೆ ಕಾರಣ ಎಂದು ಮನೆಯವರು ಆರೋಪಿಸಿದ್ದಾರೆ.

ಮೃತರನ್ನು ಕುಂದಾಪುರದ ಕೊರಗ ಎಂಬವರ ಮಗಳು ಹಾಗೂ ಗಂಗಾನಾಡು ನಿವಾಸಿ ವಿಷ್ಣು ಎಂಬವರ ಪತ್ನಿ ರಂಜಿತಾ (28) ಎಂದು ಗುರುತಿಸಲಾಗಿದೆ. ಇವರು ಜ.13ರಂದು ರಾತ್ರಿ ಮನೆಯಿಂದ ಹೋದವರು ನಾಪತ್ತೆಯಾಗಿದ್ದು, ಹುಡುಕಾಡಿ ದಾಗ ಆಕೆ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News