ಮಣ್ಣು, ಮುರಕಲ್ಲು ತೆರವಿಗೆ ಅರ್ಜಿ ಆಹ್ವಾನ

Update: 2023-09-28 14:36 GMT

ಉಡುಪಿ, ಸೆ.28: ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಾವಳಿ 1994ರ ನಿಯಮ 32ರಡಿಯಲ್ಲಿ ಮುರ‌್ರಂ (ಮಣ್ಣು) ಹಾಗೂ ಮುರಕಲ್ಲು ಉಪಖನಿಜಗಳಿಗೆ ಪಟ್ಟಾ ಜಮೀನುಗಳಲ್ಲಿ ಕಲ್ಲುಗಣಿ ಗುತ್ತಿಗೆಯನ್ನು ಮಂಜೂರು ಮಾಡಲು ಹಾಗೂ ಪಟ್ಟಾ ಜಮೀನಿನಲ್ಲಿ ನಿಯಮ 3ಎ(ಎ) ಅಡಿಯಲ್ಲಿ ನೀರಾವರಿ, ಕುಡಿಯುವ ನೀರು, ಮಳೆ ನೀರು ಕೊಯ್ಲಿಗಾಗಿ ಬಾವಿಯನ್ನು ಅಗೆಯುವ, ಕಟ್ಟಡ ಕಾಮಗಾರಿಗಾಗಿ ನೆಲ ಸಮತಟ್ಟು ಮಾಡಲು, ಕೃಷಿ-ಮೀನಗಾರಿಕೆ ಉದ್ದೇಶಕ್ಕಾಗಿ ಕೆರೆಗಳ ನಿರ್ಮಾ ಣಕ್ಕೆ ಸಂಬಂಧಿಸಿದ ಕಾರ್ಯಗಳಿಗೆ ಮುರಕಲ್ಲನ್ನು ತೆರವುಗೊಳಿಸಲು ಮುರ‌್ರಂ (ಮಣ್ಣು) ಉಪಖನಿಜಗಳನ್ನು ತೆರವುಗೊಳಿ ಸಲು ಕಾರ್ಯಾದೇಶವನ್ನು ಪಡೆಯಲು ಅವಕಾಶವಿದೆ.

ಅದರಂತೆ ಮುರಕಲ್ಲು ಹಾಗೂ ಮುರ‌್ರಂ (ಮಣ್ಣು) ಉಪಖನಿಜಗಳನ್ನು ತೆರವುಗೊಳಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮುರಕಲ್ಲು ಮತ್ತು ಮುರ‌್ರಂನ್ನು ತೆರವುಗೊಳಿಸಲು ಕಾರ್ಯಾದೇಶವನ್ನು ಪಡೆಯಲು ಇಚ್ಛಿಸುವವರು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಮರಳು ಗ್ರಾಪಂನಲ್ಲಿ: ಉಡುಪಿ ಜಿಲ್ಲೆಯ ತಾಲೂಕು ವ್ಯಾಪ್ತಿಯಲ್ಲಿ ಮರಳು ಸರಬರಾಜು ಮಾಡುವ ಸಲುವಾಗಿ 77 ಗ್ರಾಮ ಪಂಚಾಯತ್‌ಗಳಿಗೆ ಮರಳು ತೆಗೆಯಲು ಕಾರ್ಯಾದೇಶ ನೀಡಿದ್ದು, ಮರಳಿಗಾಗಿ ಸಾರ್ವಜನಿಕರು ಸಂಬಂಧಿಸಿದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳನ್ನು (ಪಿಡಿಓ) ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿಗಳ ಕಚೇರಿಯನ್ನು (ದೂರವಾಣಿ: 0820-2572333) ಸಂಪರ್ಕಿಸಬಹುದು.

ಅಲ್ಲದೇ ಎಐಎಸ್-140 ಪ್ರಮಾಣೀಕೃತ ಜಿಪಿಎಸ್ ಉಪಕರಣವನ್ನು ಅಳವಡಿಸಿಕೊಂಡು ‘ವನ್ ಸ್ಟೇಟ್ ಒನ್ ಜಿಪಿಎಸ್’ ತಂತ್ರಾಂಶದಲ್ಲಿ ಸಂಯೋಜನೆಗೊಳಿಸಿದ ನೊಂದಾಯಿತ ವಾಹನಗಳಿಗೆ ಮಾತ್ರ ಐಎಲ್‌ಎಂಎಸ್ ಮೂಲಕ ಸಾಗಾಟ ಪರವಾನಿಗೆಯನ್ನು ಸೃಜಿಸಲು ಸಾಧ್ಯವಿದ್ದು, ಅದರಂತೆ ವಾಹನಗಳಿಗೆ ಜಿಪಿಎಸ್ ಅನ್ನು ಅಳವಡಿಸಿಕೊಂಡು ಖನಿಜ ಸಾಗಾಣಿಕೆ ಪರವಾನಿಗೆಯನ್ನು ಸಂಬಂಧಿಸಿದ ಕಲ್ಲು ಗಣಿ ಗುತ್ತಿಗೆದಾರರು, ಕ್ರಷರ್ ಘಟಕಗಳ ಮಾಲಕರುಗಳಿಂದ ಸಾರ್ವಜನಿಕರು, ಲಾರಿ, ಟಿಪ್ಪರ್ ಮಾಲಕರು ಪಡೆದುಕೊಳ್ಳುವಂತೆ ಜಿಲ್ಲಾ ಮರಳು ಉಸ್ತುವಾರಿ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಭೂವಿಜ್ಞಾನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News