ಕಡಿಯಾಳಿ: ವಿಶಿಷ್ಟ ರೀತಿಯಲ್ಲಿ ಮೋದಿ ಹುಟ್ಟುಹಬ್ಬ ಆಚರಣೆ
Update: 2023-09-17 14:06 GMT
ಉಡುಪಿ, ಸೆ.17: ದೇಶದ ಪ್ರಧಾನಿ ನರೇಂದ್ರ ದಾಮೋದರ್ ದಾಸ್ ಮೋದಿ ಇವರ 73ನೇ ಜನ್ಮದಿನದ ಸಲುವಾಗಿ ಉಡುಪಿ ಕಡಿಯಾಳಿ ಹೋಟೆಲ್ ಶ್ರೀನಿವಾಸ್ ನಲ್ಲಿ ಸತತ 9ನೇ ವರ್ಷದ ಹಾಲು ಪಾಯಸ ಸೇವೆ ಮತ್ತು ಲಡ್ಡು ಸೇವೆ ನಡೆಯಿತು.
ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಬಿಜೆಪಿ ವಕ್ತಾರ ಕೆ.ರಾಘವೇಂದ್ರ ಕಿಣಿ ಉದ್ಘಾಟಿಸಿದರು. ಹಾಲು ಪಾಯಸ ಮತ್ತು ಲಡ್ಡುಗಳನ್ನು ಸಾರ್ವಜನಿಕರಿಗೆ, ಬಸ್ ಪ್ರಯಾಣಿಕರಿಗೆ, ರಿಕ್ಷಾ ಚಾಲಕರಿಗೆ ಮತ್ತು ಆಗಮಿಸಿದ ಎಲ್ಲಾ ಗ್ರಾಹಕರಿಗೆ ಉಚಿತ ವಾಗಿ ನೀಡಲಾಯಿತು.
ಪ್ರಾಯೋಜಕರಾದ ಮಲ್ಪೆ ವಲ್ಲಭ ಭಟ್, ಸದಸ್ಯರಾದ ವಸಂತ ಭಟ್, ಚಂದ್ರಶೇಖರ್ ಪ್ರಭು, ಮಂಜುನಾಥ್ ಹೆಬ್ಬಾರ್, ಅಶ್ವತ ದೇವಾಡಿಗ, ವಿಜ್ಞೇಶ್ ಪ್ರಭು, ಗಣೇಶ್ ಆಚಾರ್ಯ ಕಡಿಯಾಳಿ, ಹರಿಪ್ರಸಾದ್ ಕಡಿಯಾಳಿ, ಹೊಟೇಲಿನ ಮಾಲಕ ಕೆ.ನರಸಿಂಹ ಕಿಣಿ, ಸಂಧ್ಯಾ ಪ್ರಭು, ಭಾರತಿ ಚಂದ್ರಶೇಖರ್, ಧನುಷ್ ಶೆಟ್ಟಿ, ಶ್ರೇಯಸ್, ವಿಪುಲ್ ಪ್ರಭು ವಿಶೇಕ್ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು.