ಕಾರ್ಕಳ| ರಸ್ತೆ ಅಪಘಾತ: ಕಾರಿನೊಳಗೆ ಸಿಲುಕಿದ್ದ ಚಾಲಕನನ್ನು ರಕ್ಷಿಸಿದ ಅಗ್ನಿಶಾಮಕದಳ

Update: 2024-11-09 11:20 GMT

ಕಾರ್ಕಳ: ಬಜಗೋಳಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಕರಿಯಕಲ್ಲು - ದಾನಸಾಲೆ ಕೂಡು ರಸ್ತೆಯಲ್ಲಿ ಇಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ವಾಹನದ ಒಳಗಡೆ ಸಿಲುಕಿಕೊಂಡಿದ್ದ ಗಾಯಾಳುವನ್ನು ಅಗ್ನಿಶಾಮಕದಳ ರಕ್ಷಿಸಿದ್ದಾರೆ.

ಗಾಯಾಳನ್ನು ಮೂಡುಬಿದಿರೆ ಒಂಟಿಕಟ್ಟೆಯ ಸಂದೇಶ್ (35) ಎಂದು ಗುರುತಿಸಲಾಗಿದೆ. ಬಜಗೋಳಿಯಿಂದ ಕರಿಯಕಲ್ಲು ಮಾರ್ಗವಾಗಿ ಕಾರ್ಕಳ ಪೇಟೆಯ ಕಡೆಗೆ ಬರುತ್ತಿದ್ದ ಓಮ್ನಿ ಕಾರು ಹಾಗೂ ಕಾರ್ಕಳದಿಂದ ಬಜಗೋಳಿ ಕಡೆಗೆ ಹೋಗುತ್ತಿದ್ದ ಕಾರಿಗೆ ಮುಖಾಮುಖಿಯಾಗಿ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.

ಅಪಘಾತದ ತೀವ್ರತೆಗೆ ಓಮ್ನಿ ಕಾರು ಜಖಂಗೊಂಡಿದ್ದು, ಬಾಗಿಲು ತೆರೆಯಲಾಗದೇ ಒಳಗಡೆ ಗಾಯಾಳು ಸಿಲುಕಿಕೊಂಡಿ ದ್ದರು. ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕೆ ಆಗಮಿಸಿದ ಕಾರ್ಕಳ ಅಗ್ನಿಶಾಮಕದಳ ಕಾರ್ಯಾಚರಣೆ ನಡೆಸಿ ಗಾಯಾಳುವನ್ನು ಕಾರಿನಿಂದ ಹೊರತೆಗೆದು ಆಸ್ಪತ್ರೆಗೆ ದಾಖಲಿಸುವಲ್ಲಿ ಯಶಸ್ವಿಯಾದರು. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕಟಣ ದಾಖಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಅಗ್ನಿ ಶಾಮಕ ಠಾಣಾಧಿಕಾರಿ ಅಲ್ಟರ್ಟ್ ಮೋನಿಸ್, ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಚಂದ್ರಶೇಖರ್, ಸಿಬ್ಬಂದಿ ಜಯ ಮೂಲ್ಯ, ಸುರೇಶ್, ನಿತ್ಯಾನಂದ, ಉಮೇಶ್ ಭಾಗವಹಿಸಿದ್ದರು.


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News