ಹದಿಹರೆಯರ ಮಾನಸಿಕ ಆರೋಗ್ಯ ಕುರಿತು ಉಪನ್ಯಾಸ
Update: 2023-09-10 15:01 GMT
ಉಡುಪಿ, ಸೆ.10: ದೊಡ್ಡಣಗುಡ್ಡೆಯ ಡಾ.ಎ.ವಿ.ಬಾಳಿಗ ಆಸ್ಪತ್ರೆ ಹಾಗೂ ಉಡುಪಿ ಫಾರವರ್ಡ್ ಟ್ರಸ್ಟ್‌ಗಳ ಜಂಟಿ ಆಶ್ರಯದಲ್ಲಿ ಹದಿಹರೆಯರ ಮಾನಸಿಕ ಆರೋಗ್ಯದ ಕುರಿತು ಉಪನ್ಯಾಸ ಕಾರ್ಯಕ್ರಮವು ತೋನ್ಸೆ-ಹೂಡೆಯ ಸಾಲಿಹಾತ್ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು.
ಉಪನ್ಯಾಸಕರಾಗಿ ಆಗಮಿಸಿದ ಡಾ.ಪದ್ಮಾವತಿ ರಾಘವೇಂದ್ರ ಮಾತನಾಡಿ, ಹದಿಹರೆಯರಲ್ಲಿ ಮಾನಸಿಕ ಸಮಸ್ಯೆ ಉಂಟಾ ಗಲು ಪ್ರಮುಖ ಕಾರಣ ಮಿತಿ ಮೀರಿದ ಆಸೆ ಆಕಾಂಕ್ಷೆಗಳು, ಮುಂದಾಲೋಚನೆ ಇಲ್ಲದ ನಿರ್ಧಾರ ಹಾಗೂ ವಾಸ್ತವಿಕತೆ ಯಿಂದ ಭಿನ್ನವಾಗಿ ಯೋಚಿಸುವುದು ಇತ್ಯಾದಿಗಳಾಗಿವೆ ಎಂದು ಹೇಳಿದರು.
ವೇದಿಕೆಯಲ್ಲಿ ಕಾಲೇಜು ಆಡಳಿತಾಧಿಕಾರಿ ಅಸ್ಲಂ ಹೈಕಾಡಿ, ಪ್ರಾಂಶುಪಾಲ ರಾದ ಡಾ.ಶಬೀನ, ದಿವ್ಯ ಪೈ, ಕುಲ್ಸುಮ್ ಅಬುಬಕ್ಕರ್ ಮುಂತಾದವರು ಉಪಸ್ಥಿರಿದ್ದರು. ವಿಧ್ಯಾರ್ಥಿನಿ ಉಮಾಮ ಪ್ರಾರ್ಥನೆಗೈದರು. ರಿಮ್ಶ ಸ್ವಾಗತಿಸಿ ಸುಹಾ ವಂದಿಸಿದರು. ರುಮಾನ ಕಾರ್ಯಕ್ರಮ ನಿರ್ವಹಿಸಿದರು.