ಉಡುಪಿ ಜಿಲ್ಲೆಯ 63 ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗೆ ಅರ್ಜಿ ಆಹ್ವಾನ
ಉಡುಪಿ, ನ.25: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ ಅಧಿನಿಯಮದಂತೆ ಜಿಲ್ಲೆಯಲ್ಲಿರುವ ಪ್ರವರ್ಗ ಬಿಗೆ ಸೇರಿದ 8 ಮತ್ತು ಪ್ರವರ್ಗ ಸಿಗೆ ಸೇರಿದ 55 ದೇವಸ್ಥಾನಗಳಿಗೆ ಮೂರು ವರ್ಷಗಳ ಅವಧಿಗೆ ವ್ಯವಸ್ಥಾಪನ ಸಮಿತಿಯನ್ನು ರಚಿಸಲು ಆಸಕ್ತ ಭಕ್ತಾದಿಗಳು ಹಾಗೂ ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕನಿಷ್ಠ 25 ವರ್ಷ ವಯಸ್ಸಾಗಿರುವ ಆಸಕ್ತ ಭಕ್ತಾದಿಗಳು ಯಾವುದೇ ಒಂದು ಅಧಿಸೂಚಿತ ಸಂಸ್ಥೆ ಹಾಗೂ ದೇವಾಲಯದ ವ್ಯವಸ್ಥಾಪನಾ ಸಮಿತಿಗೆ ಮಾತ್ರ ಸದಸ್ಯತ್ವ ಕೋರಿ ಅರ್ಜಿಯನ್ನು ನಿಗದಿತ ನಮೂನೆ-1(ಬಿ)(22ನೇ ನಿಯಮ) ನಮೂನೆಯಲ್ಲಿ ಭರ್ತಿ ಮಾಡಿ ಡಿಸೆಂಬರ್ 9ರೊಳಗೆ ಸಲ್ಲಿಸಬಹುದು.
ಪ್ರವರ್ಗ ಬಿ ದೇವಸ್ಥಾನಗಳು : ಕುಂದಾಪುರ ತಾಲೂಕಿನ ಸೌಕೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ, ಕಾರ್ಕಳ ತಾಲೂಕು ಎಳ್ಳಾರೆಯ ಲಕ್ಷ್ಮೀ ಜನಾರ್ಧನ ದೇವಸ್ಥಾನ ಹಾಗೂ ಪೆರ್ವಾಜೆಯ ಶ್ರೀಮಹಾಲಿಂಗೇಶ್ವರ ದೇವಸ್ಥಾನ, ಬೈಂದೂರು ತಾಲೂಕಿನ ಮರವಂತೆಯ ಶ್ರೀ ಮಹಾರಾಜ ಸ್ವಾಮಿ ದೇವಸ್ಥಾನ, ಕಿರಿಮಂಜೇಶ್ವರದ ಶ್ರೀಅಗಸ್ತ್ಯೇಶ್ವರ ದೇವಸ್ಥಾನ ಹಾಗೂ ಬೈಂದೂರಿನ ಸೇನೇಶ್ವರ ದೇವಸ್ಥಾನ. ಉಡುಪಿ ತಾಲೂಕಿನ ಕೊಡವೂರು ಶಂಕರನಾರಾಯಣ ದೇವಸ್ಥಾನ ಹಾಗೂ ಬನ್ನಂಜೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ.
ಪ್ರವರ್ಗ ಸಿ ದೇವಸ್ಥಾನಗಳು: ಉಡುಪಿ ತಾಲೂಕಿನ ಶ್ರೀ ಮಡಿಮಲ್ಲಿಕಾರ್ಜುನ ದೇವಸ್ಥಾನ, ಕುದಿ ಗ್ರಾಮದ ಶ್ರೀ ವಿಷ್ಣು ಮೂರ್ತಿ ದೇವಸ್ಥಾನ, ಇಂದ್ರಾಳಿಯ ಶ್ರೀಪಂಚದುರ್ಗಾಪರಮೇಶ್ವರೀ ದೇವಸ್ಥಾನ, ಆತ್ರಾಡಿಯ ಶ್ರೀಮಹಾಲಿಂಗೇಶ್ವರ ದೇವಸ್ಥಾನ, ತೆಂಕನಿಡಿಯೂರು ಬೆಳ್ಕಳೆಯ ಶ್ರೀಮಹಾಲಿಂಗೇಶ್ವರ ದೇವಸ್ಥಾನ, ಕೊರಂಗ್ರಪಾಡಿ ಮಾರ್ಪಳ್ಳಿಯ ಶ್ರೀ ಮಹಾ ಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಕೊರಂಗ್ರಪಾಡಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಉದ್ಯಾವರದ ಶ್ರೀಮಹಾ ಲಿಂಗೇಶ್ವರ ದೇವಸ್ಥಾನ, ಆದಿಉಡುಪಿಯ ಶ್ರೀಮುಖ್ಯಪ್ರಾಣ ದೇವಸ್ಥಾನ ಹಾಗೂ ಪೆರಂಪಳ್ಳಿಯ ಶ್ರೀ ಮಹಾವಿಷ್ಣು ದೇವಸ್ಥಾನ.
ಕಾಪು ತಾಲೂಕಿನ ಕಳತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನ, ಪಾದೇಬೆಟ್ಟು ಸುಬ್ರಹ್ಮಣ್ಯ ದೇವಸ್ಥಾನ, ಸಾಂತೂರು ಸುಬ್ರಹ್ಮಣ್ಯ ದೇವಸ್ಥಾನ, ಕಾಪು ಮಜೂರು ಉಳಿಯಾರು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನ, ಪಿಲಾರು ಗ್ರಾಮದ ಶ್ರೀಮಹಾಲಿಂಗೇಶ್ವರ ದೇವಸ್ಥಾನ, ಮಜೂರು ಗ್ರಾಮದ ಶ್ರೀವಿಷ್ಣುಮೂರ್ತಿ ದೇವಸ್ಥಾನ ಹಾಗೂ ಬೆಳ್ಳೆಯ ಶ್ರೀಮಹಾಲಿಂಗೇಶ್ವರ ದೇವಸ್ಥಾನ.
ಕಾರ್ಕಳ ತಾಲೂಕಿನ ಎರ್ಲಪಾಡಿಯ ವೆಂಕಟರಮಣ ದೇವಸ್ಥಾನ, ಕಬ್ಬಿನಾಲೆಯ ಶ್ರೀಗೋಪಾಲಕೃಷ್ಣ ದೇವಸ್ಥಾನ ಹಾಗೂ ಮುದ್ದಾಣು ಇನ್ನಾ ಶ್ರೀಮಹಾಲಿಂಗೇಶ್ವರ ದೇವಸ್ಥಾನ.
ಕುಂದಾಪುರ ತಾಲೂಕಿನ ಬಡಾಕೋಡಿಯ ಅರಮ ಚೆನ್ನಕೇಶವ ದೇವಸ್ಥಾನ, ಕುಂದಬಾರಂದಾಡಿಯ ದುರ್ಗಾ ಪರಮೇಶ್ವರೀ ದೇವಸ್ಥಾನ, ಗುಜ್ಜಾಡಿ ಗ್ರಾಮದ ಗುಹೇಶ್ವರ ದೇವಸ್ಥಾನ, ವಡೇರಹೋಬಳಿ ಚಿಕ್ಕನ್‌ಸಾಲ್ ರಸ್ತೆಯ ಮೈಲಾರೇಶ್ವರ ದೇವಸ್ಥಾನ, ಕಾಳಾವರದ ಶ್ರೀವನದುರ್ಗಾ ದೇವಸ್ಥಾನ, ಬೈಲೂರು ಶಂಕರನಾರಾಯಣದ ಶ್ರೀಮಹಿಷ ಮರ್ಧಿನಿ ದೇವಸ್ಥಾನ, ಕೋಟೇಶ್ವರದ ಶ್ರೀ ಮಹಾದೇವಿ ಮಾರಿಯಮ್ಮ ದೇವಸ್ಥಾನ, ಹಟ್ಟಿಕುದ್ರು ಶ್ರೀವಿನಾಯಕ ದೇವಸ್ಥಾನ, ಹೆಂಗವಳ್ಳಿಯ ಶ್ರೀದುರ್ಗಾಪರಮೇಶ್ವರೀ ದೇವಸ್ಥಾನ, ಬಸ್ರೂರಿನ ಶ್ರೀಓಂಕಾರೇಶ್ವರ ದೇವಸ್ಥಾನ, ಕುಂದಾಪುರದ ಶ್ರೀ ಆಂಜನೇಯ ದೇವಸ್ಥಾನ ಹಾಗೂ ಮಲ್ಲಿಕಾರ್ಜುನ ಶ್ರೀಮಲ್ಲಿಕಾರ್ಜುನ ದೇವಸ್ಥಾನ, ತೆಕ್ಕಟ್ಟೆಯ ಶ್ರೀಮಹಾಲಿಂಗೇಶ್ವರ ದೇವಸ್ಥಾನ, ಉಳ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಹೊಸಂಗಡಿಯ ಹೊಳೆ ಶಂಕರ ನಾರಾಯಣ ದೇವಸ್ಥಾನ, ಇಡೂರು ಕುಂಜ್ಞಾಡಿಯ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಹಾಗೂ ದೇವಲ್ಕುಂದದ ಶ್ರೀವಿಷ್ಣುಮೂರ್ತಿ ದೇವಸ್ಥಾನ.
ಬೈಂದೂರು ತಾಲೂಕಿನ ಚಿಕ್ತಾಡಿಯ ಶ್ರೀದುರ್ಗಾಪರಮೇಶ್ವರೀ ದೇವಸ್ಥಾನ, ಬಿಜೂರು ಅರೆಕಲ್ಲು ಹಿರೆ ಶ್ರೀಮಹಾಲಿಂಗೇ ಶ್ವರ ದೇವಸ್ಥಾನ ಹಾಗೂ ನಾಡಾ ಗ್ರಾಮದ ವಿಷ್ಣುಮೂರ್ತಿ ದೇವಸ್ಥಾನ.
ಬ್ರಹ್ಮಾವರ ತಾಲೂಕಿನ ಮಣೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನ, ನಾಲ್ಕೂರು ಮಾರಾಳಿಯ ವಿನಾಯಕ ದೇವಸ್ಥಾನ, ತಂತ್ರಾಡಿಯ ಕಲ್ಲುಗುಂಡಿ ಮಹಾಗಣಪತಿ ದೇವಸ್ಥಾನ, ಗುಂಡ್ಮಿಯ ಮಾಣಿ ಚೆನ್ನಕೇಶವ ದೇವಸ್ಥಾನ, ಹಲುವಳ್ಳಿ ಗೋಪಾಲಕೃಷ್ಣ ದೇವಸ್ಥಾನ, ಬಾರ್ಕೂರು ಬಟ್ಟೆ ನಾಯಕ ದೇವಸ್ಥಾನ, ಚಾಂತಾರು ಕೆರೆಕಟ್ಟೆ ಹನುಮಂತ ದೇವಸ್ಥಾನ, ಬಾರ್ಕೂರು ಕೂಡ್ಲಿಯ ಶ್ರೀಜನಾರ್ದನ ದೇವಸ್ಥಾನ, ಚೇರ್ಕಾಡಿ ಕರ್ಜೆಯ ಸರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಗೋಪಾಲಕೃಷ್ಣ ದೇವಸ್ಥಾನ, ಯಡ್ತಾಡಿಯ ಚೌಡೇಶ್ವರಿ ಭೂತ ದೇವಸ್ಥಾನ, ಬಾರ್ಕೂರು ಹನೆಹಳ್ಳಿಯ ಮಹತೋಭಾರ ಸೋಮೇಶ್ವರ ದೇವಸ್ಥಾನ, ಹೊಸಾಳ ಗ್ರಾಮದ ಚೌಳಿಕೆರೆ ಶ್ರೀಭೈರವ (ಮಹಾಲಿಂಗೇಶ್ವರ ನಾಯಕ) ದೇವಸ್ಥಾನ ಹಾಗೂ ಕೋಟದ ಹಿರೇ ಮಹಾಲಿಂಗೇಶ್ವರ ದೇವಸ್ಥಾನ. ಹೆಬ್ರಿ ತಾಲೂಕಿನ ಅಲ್ಬಾಡಿಯ ಚಿತ್ತೇರಿ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ಆಯುಕ್ತರ ಕಚೇರಿ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ, ಕೊಠಡಿ ಸಂಖ್ಯೆ 206, ಬಿ ಬ್ಲಾಕ್, ಮೊದಲನೇ ಮಹಡಿ, ಜಿಲ್ಲಾ ಕಚೇರಿಗಳ ಸಂಕೀರ್ಣ, ರಜತಾದ್ರಿ, ಮಣಿಪಾಲ ಉಡುಪಿ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.