ಹಿರಿಯ ಸಾಧಕ ಸದಾನಂದ ಶೆಣೈಗೆ ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ ಗೌರವ

Update: 2024-11-25 16:17 GMT

ಉಡುಪಿ: ಪ್ರಗತಿಪರ ಕೃಷಿಕ, ಸಂಘಟಕ, ಸಮಾಜ ಸೇವಕ, ಹಿರಿಯರಾದ ಬೆಳ್ಳೆ ಅಂಗಡಿ ಸದಾನಂದ ಶೆಣೈ ಅವರಿಗೆ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕಾಪು ತಾಲೂಕು ಘಟಕದ ನೇತೃತ್ವದಲ್ಲಿ ನವಂಬರ್ ಕನ್ನಡ ಮಾಸಾಚರಣೆಯ ಶುಭಾವಸರದಲ್ಲಿ ತಿಂಗಳ ಸಡಗರ -ಹಿರಿಯರೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮದನ್ವಯ ರವಿವಾರ ಅವರ ಮನೆಯಂಗಳದಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ ಗೌರವ ನೀಡಿ ಸನ್ಮಾನಿಸಲಾಯಿತು.

ಗೌರವ ಪ್ರದಾನ ಮಾಡಿದ ಕಸಾಪ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಬೆಳ್ಳೆ ಅಂಗಡಿ ಕುಟುಂಬ ಸ್ಥರು ಸ್ವಾತಂತ್ರ್ಯ ಪೂರ್ವದಿಂದಲೇ ಈ ಭಾಗದ ನಾಗರಿಕರ ಸರ್ವಾಂಗೀಣ ಪ್ರಗತಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದು, ಶಿಕ್ಷಣದ ಜೊತೆಗೆ ಸ್ವಾವಲಂಬಿ ಜೀವನಕ್ಕೆ ಪೂರಕ ಸೇವೆಗಳನ್ನು ನೀಡಿ ಮನೆ ಮಾತಾಗಿದ್ದಾರೆ. 83ರ ಹರೆಯದ ಸದಾನಂದ ಶೆಣೈರವರ ಸೇವೆ ಸದಾ ಸ್ಮರಣೀಯ ಎಂದರು.

ಬೆಳ್ಳೆ ಗ್ರಾ.ಪಂ. ಉಪಾಧ್ಯಕ್ಷ ಶಶಿಧರ ವಾಗ್ಲೆ ಮಾತನಾಡಿದರು. ಅಧ್ಯಕ್ಷತೆಯನ್ನು ಕಸಾಪ ಕಾಪು ತಾಲೂಕು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಬೆಳ್ಳೆ ಗ್ರಾಪಂ ಅಧ್ಯಕ್ಷೆ ದಿವ್ಯಾ ವಿ.ಆಚಾರ್ಯ, ವಿಶಾಖಪಟ್ಟಣ ಭಾರತ ಸರಕಾರದ ಸಿಎಸ್‌ಐಆರ್ ನಿಯೋ ಇದರ ಹಿರಿಯ ವಿಜ್ಞಾನಿ ಡಾ.ಬೆಳ್ಳೆ ದಾಮೋದರ ಶೆಣೈ, ಬೆಳ್ಳೆ ಗ್ರಾಪಂ ಸದಸ್ಯ ಹರೀಶ್ ಶೆಟ್ಟಿ, ಬೆಳ್ಳೆ ಪಠೇಲ್ ಮನೆ ದಯಾನಂದ ಶೆಟ್ಟಿ, ಕಸಾಪ ಜಿಲ್ಲಾ ಸಮಿತಿಯ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್, ನರಸಿಂಹ ಮೂರ್ತಿ, ನಿವೃತ್ತ ಕಛೇರಿ ಸಿಬಂಧಿ ಇಟ್ಟು ಮುಗ್ಗೇರ, ತಾಲೂಕು ಕಸಾಪ ಗೌರವ ಕಾರ್ಯದರ್ಶಿ ನೀಲಾನಂದ ನಾಯ್ಕ್, ಪುಂಡಲೀಕ ನಾಯಕ್ ಮೂಡುಬೆಳ್ಳೆ, ಸಾಹಿತಿ ರಿಚ್ಚಾರ್ಡ್ ದಾಂತಿ, ಬೆಳ್ಳೆ ದೊಡ್ಡಮನೆ ವಸಂತ ಶೆಟ್ಟಿ, ಸನ್ಮಾನಿತರ ಪತ್ನಿ ವಸಂತಿ ಶೆಣೈ ಮೊದಲಾದವರು ಉಪಸ್ಥಿತರಿದ್ದರು.

ಕಸಾಪ ತಾಲೂಕು ಸಂಘಟನಾ ಕಾರ್ಯದರ್ಶಿ ಕೆ.ಆರ್.ಪಾಟ್ಕರ್ ಸ್ವಾಗತಿಸಿದರು. ಹಿರಿಯ ಸದಸ್ಯ ಕೃಷ್ಣಕುಮಾರ್ ಮಟ್ಟು ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಅಶ್ವ್ವಿನ್ ಲಾರೆನ್ಸ್ ಮೂಡುಬೆಳ್ಳೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News