ನ.26ರಂದು ಬೌದ್ಧ ವೇದಿಕೆಯಿಂದ ಪ್ರತಿಭಟನೆ
Update: 2024-11-25 16:26 GMT
ಉಡುಪಿ: ಅಖಿಲ ಭಾರತ ಬೌದ್ಧ ವೇದಿಕೆಯ ವತಿಯಿಂದ ಮಹಾ ಬೋಧಿ ಬುದ್ಧ ವಿಹಾರದ ಆಡಳಿತ ಮತ್ತು ಅಧಿಕಾರವನ್ನು ಸಂಪೂರ್ಣವಾಗಿ ಬೌದ್ಧರಿಗೆ ನೀಡಬೇಕೆಂದು ಒತ್ತಾಯಿಸಿ ಹಾಗೂ ಐತಿಹಾಸಿಕ ಧಾರ್ಮಿಕ ಅನ್ಯಾಯವನ್ನು ಖಂಡಿಸಿ ನ.26ರಂದು ಬೆಳಿಗ್ಗೆ 11ಗಂಟೆಗೆ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಬಳಿಕ ಈ ಕುರಿತು ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ದಸಂಸ ಅಂಬೇಡ್ಕರ್ ವಾದ ಜಿಲ್ಲಾ ಪ್ರಧಾನ ಸಂಚಾಲಕ ಟಿ.ಮಂಜುನಾಥ ಗಿಳಿಯಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.