ನ.26ರಿಂದ ಬಿಜೆಪಿಯ ಸಂವಿಧಾನ ಸಮ್ಮಾನ ಅಭಿಯಾನ

Update: 2024-11-25 16:14 GMT

ಉಡುಪಿ, ನ.25: ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಂದ ರಚಿಸಲ್ಪಟ್ಟಿರುವ ಭಾರತದ ಸಂವಿಧಾನದ ಕುರಿತು ಜಾಗೃತಿ ಮೂಡಿಸುವ ‘ಸಂವಿಧಾನ ಸಮ್ಮಾನ ಅಭಿಯಾನ’ವು ಜಿಲ್ಲೆಯಾದ್ಯಂತ ನ.26ರಿಂದ ಜ.26ರ ವರೆಗೆ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ‘ಸಂವಿಧಾನ ದಿನ’’ ಆಚರಣೆ ಮತ್ತು ‘ಸಂವಿಧಾನ ಸಮ್ಮಾನ’ ಅಭಿಯಾನಕ್ಕೆ ಚಾಲನೆ ನೀಡುವ ಕಾರ್ಯ ಕ್ರಮ ನ.26ರ ಬೆಳಿಗ್ಗೆ 10 ಗಂಟೆಗೆ ದಲಿತ ಸಮುದಾಯದ ನಾಯಕ ಗೋಕುಲ್‌ದಾಸ್ ಬಾರ್ಕೂರು ಅವರ ಅಧ್ಯಕ್ಷತೆಯಲ್ಲಿ ಉಡುಪಿ ಅಂಬಲಪಾಡಿಯ ಹೋಟೆಲ್ ಕಾರ್ತಿಕ್ ಎಸ್ಟೇಟ್ ಸಭಾಂಗಣದಲ್ಲಿ ನಡೆಯಲಿದೆ.

ಮಾಜಿ ಸಚಿವಎನ್. ಮಹೇಶ್ ಹಾಗೂ ಸಾಮಾಜಿಕ ಚಿಂತಕ ಚರಣ್ ಗುಂಜೂರು ಬೆಂಗಳೂರು ಇವರು ಪ್ರಮುಖ ಭಾಷಣ ಕಾರರಾಗಿ ಸಂವಿಧಾನದ ಆಶಯಗಳ ಕುರಿತು ಮಾತನಾಡಲಿದ್ದಾರೆ. ಜಿಲ್ಲೆಯ ಶಾಸಕರು ಉಪಸ್ಥಿತರಿರು ವರು ಎಂದು ಅಭಿಯಾನದ ಸಂಚಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News