ತಮ್ಮ ಮಗನನ್ನು ಶಿಗ್ಗಾವಿಯಲ್ಲಿ ಜನರು ಹೊರದಬ್ಬಿದ್ದಾರೆ: ಹಿಜಾಬ್ ಹೋರಾಟಗಾರ್ತಿ ಆಲಿಯಾ ಅಸಾದಿ

Update: 2024-11-25 14:18 GMT

ಭರತ್‌ ಬೊಮ್ಮಾಯಿ

ಉಡುಪಿ, ನ.25: ಶಾಲಾ ಕಾಲೇಜು ತರಗತಿಯಲ್ಲಿ ಹಿಜಾಬ್ ನಿಷೇಧಿಸಿ ಆದೇಶ ಹೊರಡಿಸಿದ್ದ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಗ ಭರತ್‌ ಬೊಮ್ಮಾಯಿ ಶಿಗ್ಗಾವಿಯ ಉಪಚುನಾವಣೆಯಲ್ಲಿ ಸೋತಿರುವ ಬಗ್ಗೆ ಹಿಜಾಬ್ ಹೋರಾಟಗಾರ್ತಿ ಆಲಿಯಾ ಅಸಾದಿ ಎಕ್ಸ್‌ನಲ್ಲಿ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಹಿಜಾಬ್ ಹೋರಾಟಗಾರ್ತಿ ಆಲಿಯಾ ಅಸಾದಿ, "ಬೊಮ್ಮಾಯಿ ಅವರೇ ನೀವು ಮುಖ್ಯಮಂತ್ರಿ ಇದ್ದಾಗ ರಾಜ್ಯಾದ್ಯಂತ ಹಿಜಾಬ್ ಮೂಲಕ ಮುಸ್ಲಿಂ ಹೆಣ್ಮಕ್ಕಳನ್ನು ತರಗತಿಯಿಂದ ಹೊರದಬ್ಬಿ, ಅವರ ಶೈಕ್ಷಣಿಕ ಬದುಕಿಗೆ ಕೊಲ್ಲಿ ಇಟ್ಟಿದ್ದೀರಿ. ಇಂದು ತಮ್ಮ ಮಗನನ್ನು ಶಿಗ್ಗಾವಿಯಲ್ಲಿ ಜನರು ಹೊರದಬ್ಬಿ ದ್ವೇಷ, ಸುಳ್ಳು, ಅನ್ಯಾಯ, ಕೋಮುವಾದಕ್ಕೆ ಇಲ್ಲಿ ನೆಲೆ ಇಲ್ಲ ಎಂಬ ಸ್ಪಷ್ಟ ಸಂದೇಶ ಸಾರಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News