ಮಾಹೆ-ಸಿಪ್ಲಾ ಒಪ್ಪಂದ: ಪ್ರಥಮ ಬ್ಯಾಚ್ ಓರಿಯಂಟೇಶನ್ ಕಾರ್ಯಕ್ರಮ
ಮಣಿಪಾಲ, ಆ.9: ಮಣಿಪಾಲದ ಮಾಹೆ ವಿಶ್ವವಿದ್ಯಾಲಯವು ತನ್ನ ಉನ್ನತಿ(ವರ್ಕ್ ಇಂಟಿಗ್ರೇಟೆಡ್ ಲರ್ನಿಂಗ್ ಪ್ರೋಗಾಂ) ಯ ಪ್ರಥಮ ಬ್ಯಾಚ್‌ನ ಓರಿಯಂಟೇಶನ್ ಕಾರ್ಯಕ್ರಮವನ್ನು ಇತ್ತೀಚೆಗೆ ಗೋವಾದ ವೆರ್ನಾದಲ್ಲಿರುವ ಸಿಪ್ಲಾ ಅಕಾಡೆಮಿ ಯಲ್ಲಿ ಆಯೋಜಿಸಿತ್ತು.
ಮಾಹೆ ವಿವಿ ಅಡಿಯಲ್ಲಿ ಸ್ಲಿಪಾದ ಉದ್ಯೋಗಿಗಳು ತಮ್ಮ ’ಡಿಪ್ಲೊಮಾ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್’ ಅನ್ನು ಮುಂದುವರಿಸಲು ಮಾರ್ಚ್ ತಿಂಗಳಲ್ಲೇ ಈ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿತ್ತು. ಇದೇ ವೇಳೆ ಮಾಹೆ ಮತ್ತು ಸಿಪ್ಲಾ ನಡುವೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಮಾಡಲಾಗಿದೆ. ಈ ಮೂಲಕ ಎಐಸಿಟಿಇಯು 60 ವಿದ್ಯಾರ್ಥಿಗಳ ಪ್ರವೇಶದೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲು ಮಾಹೆಗೆ ಅನುಮೋದನೆ ನೀಡಿದೆ.
ಮುಖ್ಯ ಅತಿಥಿಯಾಗಿ ಮಾಹೆ ಎಂಐಟಿಯ ಜಂಟಿ ನಿರ್ದೇಶಕ ಡಾ.ಸೋಮಶೇಖರ್ ಭಟ್, ಶೈಕ್ಷಣಿಕ ಕೇಂದ್ರವಾಗಿ ಮಣಿಪಾಲದ ಗಮನಾರ್ಹ ಪ್ರಯಾಣ ಮತ್ತು ಡಾ.ಟಿ.ಎಂ.ಎ ಪೈ ಅವರ ದೂರದರ್ಶಿತ್ವದ ಪ್ರಯತ್ನಗಳ ಕುರಿತು ಮಾತನಾ ಡಿದರು. ಸಿಪ್ಲಾ ಸಂಸ್ಥೆಯ ಹಿರಿಯ ವಿಪಿ(ಎಚ್‌ಆರ್) ವಿನಯ್ ಬಸ್ಸಿ ಮಾತನಾಡಿದರು. ಮಣಿಪಾಲದ ಎಂಐಟಿ ನಿರ್ದೇಶಕ ಡಾ.ಅನಿಲ್ ರಾಣಾ ಆನ್ಲೈನ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಆನ್‌ಸೈಟ್/ಆನ್‌ಲೈನ್/ವಿದ್ಯಾರ್ಥಿ-ನಿರ್ದೇಶಿತ ಕಲಿಕೆಯ ಆರು ಸೆಮಿಸ್ಟರ್‌ಗಳನ್ನು ಪೂರ್ಣಗೊಳಿಸಿದ ನಂತರ ಉದ್ಯೋಗಿ ಗಳಿಗೆ ಡಿಪ್ಲೊಮಾವನ್ನು ನೀಡಲಾಗುತ್ತದೆ. ವಾರಾಂತ್ಯದಲ್ಲಿ ನಡೆಯುವ ತರಗತಿಗಳು ಮತ್ತು ಸಂಪೂರ್ಣ ಕಾರ್ಯಕ್ರಮ ವನ್ನು ಮೂರೂವರೆ ವರ್ಷಗಳಲ್ಲಿ ಪೂರ್ಣಗೊಳಿಸುವ ರೀತಿಯಲ್ಲಿ ಕೋರ್ಸ್ ರಚಿಸಲಾಗಿದೆ. 38 ವಿದ್ಯಾರ್ಥಿಗಳ ಮೊದಲ ಬ್ಯಾಚ್‌ಅನ್ನು ಆರಂಭಿಸಲಾಗಿದೆ. ಎಂಐಟಿಯ ವಿವಿಧ ವಿಭಾಗಗಳ ಅಧ್ಯಾಪಕರು ಪ್ರಯೋ ಗಾಲಯ ಕೋರ್ಸ್‌ಗಳನ್ನು ಒಳಗೊಂಡಂತೆ ಕೋರ್ಸ್ ಮಾಡ್ಯೂಲ್‌ಗಳನ್ನು ಕಲಿಸಲಾಗುತ್ತದೆ.