ಕುಮಟಾ-ಕುಂದಾಪುರ ಮಧ್ಯೆ ನಿರ್ವಹಣಾ ಕಾರ್ಯ: ಕೊಂಕಣ ಮಾರ್ಗದ ರೈಲು ಸಂಚಾರದಲ್ಲಿ ವ್ಯತ್ಯಯ

Update: 2023-08-30 13:58 GMT

ಉಡುಪಿ, ಆ.30: ಕೊಂಕಣ ರೈಲು ಮಾರ್ಗದ ಕುಮಟಾ ಹಾಗೂ ಕುಂದಾಪುರ ನಿಲ್ದಾಣಗಳ ಮಧ್ಯೆ ಸೆ.1ರಂದು ಅಪರಾಹ್ನ 1:10ರಿಂದ 4:10ರವರೆಗೆ ಒಟ್ಟು ಮೂರು ಗಂಟೆಗಳ ಕಾಲ ನಿರ್ವಹಣಾ ಕಾರ್ಯ ನಡೆಯಲಿರುವುದರಿಂದ ಈ ಮಾರ್ಗದ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಇದರಿಂದ ಆ.31ರಂದು ಪ್ರಯಾಣ ಪ್ರಾರಂಭಿಸುವ ರೈಲು ನಂ.16333 ವಿರಾವಲ್-ತಿರುವನಂತಪುರಂ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ರೋಹಾ ಮತ್ತು ಕುಮಟಾ ನಡುವೆ ಮೂರು ಗಂಟೆಗಳ ಕಾಲ ತಡೆ ಹಿಡಿಯಲಾಗುವುದು.

ಅದೇ ರೀತಿ ಸೆ.1ರಂದು ಪ್ರಯಾಣಿಸುವ ರೈಲು ನಂ.12620 ಮಂಗಳೂರು ಸೆಂಟ್ರಲ- ಲೋಕಮಾನ್ಯ ತಿಲಕ್ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ಸುರತ್ಕಲ್ ಹಾಗೂ ಕುಂದಾಪುರ ನಡುವೆ ಒಂದೂವರೆ ಗಂಟೆಗಳ ಕಾಲ ತಡೆ ಹಿಡಿಯ ಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News