ಮಲ್ಪೆ: ಮನೆಗೆ ನುಗ್ಗಿ‌ ಚಿನ್ನಾಭರಣ ಕಳವು

Update: 2023-08-09 16:19 GMT

ಸಾಂದರ್ಭಿಕ ಚಿತ್ರ

ಮಲ್ಪೆ, ಆ.9: ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಗಳನ್ನು ಕಳವು ಮಾಡಿರುವ ಘಟನೆ ಆ.8ರಂದು ಬೆಳಗ್ಗೆ ಕಿನ್ನಿಮೂಲ್ಕಿ ಎಂಬಲ್ಲಿ ನಡೆದಿದೆ.

ವೆಂಕಟೇಶ ಶೆಣೈ ಎಂಬವರ ಮನೆಯ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಬೆಡ್‌ರೂಮಿನ ಕಪಾಟಿನಲ್ಲಿದ್ದ ಹವಳದ ಸರ, ಚಿನ್ನದ ನೆಕ್ಲೇಸ್, ಚಿನ್ನದ ಬಳೆ, 2 ಸರ, ಕೈ ಖಡಗ, ಚಿನ್ನದ ಉಂಗುರ, ಚಿನ್ನದ ನಾಣ್ಯ, ಚಿನ್ನದ ಓಲೆ ಹಾಗೂ ಬೆಳ್ಳಿಯ ಕಾಲು ಚೈನ್ ಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ಒಟ್ಟು 160 ಗ್ರಾಂ ಚಿನ್ನ ಹಾಗೂ 5 ಗ್ರಾಂ ಬೆಳ್ಳಿಯ ಆಭರಣಗಳ ಮೌಲ್ಯ ಮೌಲ್ಯ 803500 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News