ಮಲ್ಪೆ: ರಾಷ್ಟ್ರಮಟ್ಟದ ಯುವ ಬಾಕ್ಸಿಂಗ್ ಪಟು ವೀರಜ್ ಮೆಂಡನ್ ಆತ್ಮಹತ್ಯೆ

Update: 2023-09-05 10:56 GMT

ಮಲ್ಪೆ : ರಾಷ್ಟ್ರಮಟ್ಟದ ಯುವ ಬಾಕ್ಸಿಂಗ್ ಪಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಲ್ಪೆಯ ಶಾಂತಿನಗರ ಎಂಬಲ್ಲಿ ಮಂಗಳವಾರ ನಡೆದಿದೆ.

ಮೃತರನ್ನು ಶಾಂತಿನಗರದ ನಿವಾಸಿ ವೀರಜ್ ಮೆಂಡನ್ (29) ಎಂದು ಗುರುತಿಸಲಾಗಿದೆ.

ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ಇವರು, ವೈಯಕ್ತಿಕ ಕಾರಣಕ್ಕೆ ಮನನೊಂದು ಮನೆಯ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ದೇಶದ ವಿವಿಧೆಡೆ ನಡೆಯುತ್ತಿದ್ದ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ವೀರಜ್ ಮೆಂಡನ್‌ ಚಿನ್ನದ ಪದಕವನ್ನು ಗೆದ್ದು ರಾಜ್ಯಕ್ಕೆ ಹಾಗೂ ಕರಾವಳಿ ಜಿಲ್ಲೆಗೆ ಕೀರ್ತಿ ತಂದಿದ್ದರು.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News