ಮಲ್ಪೆ: ಸಮಸ್ತ ಮೀನುಗಾರರಿಂದ ಸಮುದ್ರ ಪೂಜೆ

Update: 2023-08-31 13:51 GMT

ಮಲ್ಪೆ, ಆ.31: ಈ ಋತುವಿನಲ್ಲಿ ಮೀನುಗಾರಿಕೆ ನಡೆಸುವಾಗ ಯಾವುದೇ ತೊಂದರೆಗಳಾಗದಂತೆ ಗಂಗಾಮಾತೆಗೆ ಕ್ಷೀರ, ಫಲಪುಷ್ಪವನ್ನು ಅರ್ಪಿಸಿ ವಿಶೇಷ ಪೂಜೆ ಸಲ್ಲಿಸುವ ಸಮುದ್ರ ಪೂಜೆ ಕಾರ್ಯಕ್ರಮ ಮಲ್ಪೆ ಕಡಲತೀರದಲ್ಲಿ ಗುರುವಾರ ಮುಂಜಾನೆ ಸಾಂಪ್ರದಾಯಿಕ ರೀತಿಯಲ್ಲಿ ನಡೆಯಿತು.

ಮಲ್ಪೆ ಮೀನುಗಾರ ಸಂಘದ ನೇತೃತ್ವದಲ್ಲಿ, ವಿವಿಧ ಮೀನುಗಾರಿಕಾ ಸಂಘಟನೆಗಳು ಹಾಗೂ ಸಮಸ್ತ ಮೀನುಗಾರರ ಉಪಸ್ಥಿತಿಯಲ್ಲಿ ಸಮುದ್ರ ಪೂಜೆ ನೆರವೇರಿತು.

ಬಾಲಕೃಷ್ಣ ತಂತ್ರಿ ಹಾಗೂ ಶ್ರೀನಿವಾಸ್ ಭಟ್ ಪೌರೋಹಿತ್ಯದಲ್ಲಿ ಬೆಳಗ್ಗೆ ವಡಭಾಂಡೇಶ್ವರದ ಬಲರಾಮ ಹಾಗೂ ಬೊಬ್ಬರ್ಯ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಬಳಿಕ ಮೀನುಗಾರರೆಲ್ಲರು ಶೋಭಾಯಾತ್ರೆ ಯಲ್ಲಿ ತೆರಳಿ ವಡಭಾಂಡೇಶ್ವರ ಸಮುದ್ರ ತೀರದಲ್ಲಿ ಪೂಜೆಯನ್ನು ನಡೆಸಿದರು. ಬಳಿಕ ಮೀನುಗಾರರು ಕ್ಷೀರಾ ಫಲಪುಷ್ಪ, ಸೀಯಾಳ ವನ್ನು ಸಮುದ್ರ ರಾಜನಿಗೆ ಸಮರ್ಪಿಸಿ ಮೀನುಗಾರರಿಗೆ ರಕ್ಷಣೆ ಹಾಗೂ ಸುರಕ್ಷತೆಯನ್ನು ಕೋರಿದರು.

ಸಮುದ್ರ ಪೂಜೆಯಲ್ಲಿ ಶಾಸಕ ಯಶ್‌ಪಾಲ್ ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉಚ್ಚಿಲ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಕಾಂಗ್ರೆಸ್ ನಾಯಕ, ಉದ್ಯಮಿ ಪ್ರಸಾದ್‌ರಾಜ್ ಕಾಂಚನ್, ಮೀನುಗಾರ ಸಂಘದ ಅಧ್ಯಕ್ಷ ದಯಾನಂದ ಕೆ. ಸುವರ್ಣ, ಕಾರ್ಯದರ್ಶಿ ಜಗನ್ನಾಥ ಕಡೆಕಾರು, ಕೋಶಾಧಿಕಾರಿ ಪ್ರಕಾಶ್ ಬಂಗೇರ, ಪ್ರಮುಖರಾದ ನಾಗರಾಜ್ ಬಿ. ಕುಂದರ್, ರಮೇಶ್ ಕೋಟ್ಯಾನ್, ನಾಗರಾಜ್ ಸುವರ್ಣ, ಕಿಶೋರ್ ಡಿ. ಸುವರ್ಣ, ರತ್ನಾಕರ್ ಸಾಲ್ಯಾನ್, ಕಿಶೋರ್ ಕುಮಾರ್, ಧನಂಜಯ್ ಕಾಂಚನ್, ಶಿವಪ್ಪ ಕಾಂಚನ್, ಸತೀಶ್ ಕುಂದರ್, ರಾಘವ ಜಿ.ಕೆ., ಕರುಣಾಕರ್ ಸಾಲ್ಯಾನ್, ಹರಿಯಪ್ಪ ಕೋಟ್ಯಾನ್, ಸಾಧು ಸಾಲ್ಯಾನ್, ಗುಂಡು ಬಿ. ಅಮೀನ್, ಆನಂದ ಪಿ. ಸುವರ್ಣ, ಹಿರಿಯಣ್ಣ ಟಿ. ಕಿದಿಯೂರು, ರಾಮಚಂದ್ರ ಕುಂದರ್, ಸುಭಾಷ್ ಎಸ್. ಮೆಂಡನ್, ಕೇಶವ ಕೋಟ್ಯಾನ್, ಶಿವಾನಂದ, ಶಂಕರ ಬಂಗೇರ, ವಿಠಲ ಕರ್ಕೇರ, ಗೋಪಾಲ ಅರ್. ಕೆ, ದಯಾನಂದ ಕುಂದರ್, ಪ್ರಭಾಕರ ಸುವರ್ಣ, ಕೃಷ್ಣ ಎಸ್. ಸುವರ್ಣ, ಸುಂದರ್ ಪಿ. ಸಾಲ್ಯಾನ್, ನಾರಾಯಣ್ ಜೆ. ಕರ್ಕೆರ, ನವೀನ್ ಕೊಟ್ಯಾನ್, ಮೋಹನ್ ಕುಂದರ್, ಹರಿಶ್ಚಂದ್ರ ಕಾಂಚನ್, ರವಿರಾಜ್ ಸುವರ್ಣ, ದಯಾಕರ್ ಸುವರ್ಣ, ಪಾಂಡುರಂಗ ಕೊಟ್ಯಾನ್, ಕೃಷ್ಣ ಜಿ. ಕೋಟ್ಯಾನ್, ಗಣೇಶ್ ಕುಂದರ್, ಬೇಬಿ ಸಾಲ್ಯಾನ್, ಸುಮಿತ್ರ ಕುಂದರ್ ಅಲ್ಲದೇ ಮೀನುಗಾರಿಕಾ ಇಲಾಖಾ ಅಧಿಕಾರಿಗಳು, ಬಂದರಿನ ಎಂಜಿನಿಯರ್‌ಗಳು, ಆರಕ್ಷಕ ದಳದವರು, ಕರಾವಳಿ ಕಾವಲು ಪಡೆಯವರು ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News