ಮಾರ್ಚ್ 31ರವರೆಗೆ ಮಂಗಳೂರು ಜಂಕ್ಷನ್-ಮುಂಬೈ ಎಕ್ಸ್‌ಪ್ರೆಸ್ ರೈಲು ಸಂಚಾರ ವ್ಯತ್ಯಯ
Update: 2025-03-24 20:17 IST
ಸಾಂದರ್ಭಿಕ ಚಿತ್ರ
ಉಡುಪಿ: ಮುಂಬಯಿ ಸಿಎಸ್‌ಎಂಟಿ ನಿಲ್ದಾಣದ ಪ್ಲಾಟ್‌ಫಾರಂ ನಂ.12 ಮತ್ತು 13ರ ವಿಸ್ತರಣಾ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಜಂಕ್ಷನ್ ಹಾಗೂ ಮುಂಬಯಿ ಸಿಎಸ್‌ಎಂಟಿ ನಡುವೆ ಸಂಚರಿಸುವ ರೈಲು ನಂ.12134 ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ಮಾರ್ಚ್ 31ರವರೆಗೆ ಥಾಣೆ ನಿಲ್ದಾಣದಲ್ಲಿ ಮುಕ್ತಾಯಗೊಳಿಸಲಾಗುತ್ತದೆ ಎಂದು ಕೇಂದ್ರ ರೈಲ್ವೆಯ ಪ್ರಕಟಣೆ ತಿಳಿಸಿದೆ.
ಇದರೊಂದಿಗೆ ಮಡಗಾಂವ್ ಜಂಕ್ಷನ್ ಹಾಗೂ ಮುಂಬಯಿ ಸಿಎಸ್‌ಎಂಟಿ ನಡುವೆ ಸಂಚರಿಸುವ ತೇಜಸ್ ಎಕ್ಸ್‌ಪ್ರೆಸ್ ಹಾಗೂ ಜನಶತಾಬ್ದಿ ಎಕ್ಸ್‌ಪ್ರೆಸ್‌ನ ಸಂಚಾರವನ್ನು ಮಾ.31ರವರೆಗೆ ದಾದರ್ ನಿಲ್ದಾಣದಲ್ಲಿ ಕೊನೆಗೊಳಿಸಲು ನಿರ್ಧರಿಸಲಾಗಿದೆ ಎಂದು ಅದು ಹೇಳಿದೆ.