ಮಾಹಿತಿ ಕೊರತೆಯಿಂದ ಆಂಟಿಬಯೋಟಿಕ್ ದುರ್ಬಳಕೆ: ಶಂಕರ್

Update: 2024-09-20 12:20 GMT

ಉಡುಪಿ, ಸೆ.20: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಔಷಧ ನಿಯಂತ್ರಣ ಇಲಾಖೆಗಳ ಜಂಟಿ ಸಹ ಭಾಗಿತ್ವದ ಆಂಟಿ ಬಯಾಟಿಕ್ ಬಳಕೆಯ ಸಾರ್ವಜನಿಕ ಜಾಗೃತಿ ಪತ್ರದ ಬಿಡುಗಡೆಯ ಕಾರ್ಯಕ್ರಮ ಬುಧವಾರ ಉಡುಪಿ ಜಿಲ್ಲಾ ಔಷಧಿ ವ್ಯಾಪಾರ ಸಂಘದ ಕಚೇರಿಯಲ್ಲಿ ನಡೆಯಿತು.

ಪತ್ರವನ್ನು ಬಿಡುಗಡೆಗೊಳಿಸಿದ ಸಹಾಯಕ ಔಷದ ನಿಯಂತ್ರಕ ಶಂಕರ್ ನಾಯಕ್ ಮಾತನಾಡಿ, ಮಾಹಿತಿಯ ಕೊರತೆ ಯಿಂದ ಆಂಟಿ ಬಯೋಟಿಕ್ ಔಷಧಿಗಳು ದುರ್ಬಳಕೆಯಾಗುತ್ತಿದ್ದು, ವೈದ್ಯರು ಸೂಚಿಸಿದ ಆಂಟಿ ಬಯೋಟಿಕ್ ಅನ್ನು ಸಂಪೂರ್ಣ ವಾಗಿ ಬಳಕೆ ಮಾಡದೇ ಇರುವುದರಿಂದ ಪ್ರತಿಜೀವಕಗಳು ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡಿದೆ. ಹೆಚ್ಚಿನ ಅಂಟಿಬಯೋಟಿಕ್ ಔಷಧಿಗಳು ಜನರ ದೇಹದಲ್ಲಿ ಕೆಲಸವನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಇದು ಮುಂದಿನ ದಿನಗಳಲ್ಲಿ ಬಾರಿ ಅಪಾಯಕಾರಿಯಾಗಿ ಪರಿಣಮಿಸಬಲ್ಲದು. ಈ ಬಗ್ಗೆ ಎಲ್ಲರೂ ಈಗಲೇ ಎಚ್ಚತ್ತುಕೊಳ್ಳಬೇಕು ಎಂದರು.

ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಔಷದ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಮ್ಮುಂಜೆ ರಮೇಶ್ ನಾಯಕ್ ವಹಿಸಿದ್ದರು. ಸಂಘದ ಸದಸ್ಯರು ಉಪಸ್ಥಿತರಿದ್ದರು. ಬಳಿಕ ಜಾಗೃತಿ ಪತ್ರವನ್ನು ಉಡುಪಿಯ ಎಲ್ಲಾ ಔಷಧಿ ಅಂಗಡಿಗಳಿಗೆ ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News