ಆರಂಭ ನಿಮ್ಮಿಂದಾದರೆ ಅಂತ್ಯ ನಮ್ಮಿಂದಲೇ: ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ

Update: 2024-09-23 15:48 GMT

ಕಾರ್ಕಳ: ಬಿಜೆಪಿಯ ಪರವಾಗಿ ಮಾತನಾಡುವವರನ್ನು ಬೆದರಿಸಿದರೆ ಬಿಜೆಪಿ ಹೆದರುವುದಿಲ್ಲ, ಇಲ್ಲಸಲ್ಲದ ಅರೋಪಗಳ ಆರಂಭ ನಿಮ್ಮಿಂದಾದರೆ ಅದಕ್ಕೆ ಅಂತ್ಯ ನಮ್ಮಿಂದಲೇ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ ಎಚ್ಚರಿಕೆ ನೀಡಿದರು.

ಹೋಟೆಲ್ ಪ್ರಕಾಶ್‌ನಲ್ಲಿ ಸೆ. 23ರಂದು ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಚುನಾವಣೆ ನಂತರ ರಾಜಕೀಯ ಮೇಲಾಟಗಳು ರಾಜಕೀಯ ದೊಂಬರಾಟಗಳು ದಿನೇದಿನೇ ಹೆಚ್ಚಾಗುತ್ತಿದೆ. ರಾಜಕೀಯ ತೆವಲಿ ಗೋಸ್ಕರ ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮಾಧ್ಯಮಗಳ ಮುಂದೆ ದಿನಕ್ಕೊಂದು ಹೇಳಿಕೆಗಳನ್ನು ನೀಡಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಅಧಿಕಾರ ಬಂದ ನಂತರ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಹಾಗಾಗಿ ಅಭಿವೃದ್ಧಿ ಪರ ಮಾತನಾ ಡಲು ಇವರಲ್ಲಿ ವಿಷಯಗಳಿಲ್ಲ. ನಾಲಿಗೆಯ ಚಪಲಕ್ಕಾಗಿ ಬಿಜೆಪಿಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಟೀಕಿಸುವುದೇ ಇವರ ದಿನಚರಿ ಆಗಿದೆ. ಸುನಿಲ್ ಕುಮಾರ್ ಅವರ ಕನಸಿನ ಯೋಜನೆ ಪರಶುರಾಮ ಥೀಮ್ ಪಾರ್ಕ್ ಯೋಜನೆಯ ವಿರುದ್ಧ ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರಲ್ಲೇ ಸ್ಪಷ್ಟತೆ ಇಲ್ಲದೆ ಮನಸ್ಸಿಗೆ ತೋಚಿದ ಹೇಳಿಕೆಗಳನ್ನು ನೀಡುತ್ತಿ ದ್ದಾರೆ. ಮೂರ್ತಿಯ ನೈಜತೆಯ ಬಗ್ಗೆ ಇವರದ್ದೇ ಸರಕಾರ ಇದ್ದರೂ ಇದನ್ನು ಸ್ಪಷ್ಟಪಡಿಸಲು ಯಾಕೆ ಆಗಿಲ್ಲ ಎಂದು ಪ್ರಶ್ನಿಸಿ ದರು. ಇವರಿಗೆ ತನಿಖೆ ಹಾಗೂ ಮೂರ್ತಿಯ ನೈಜತೆಯ ಸ್ಪಷ್ಟತೆಯ ಅವಶ್ಯಕತೆ ಇಲ್ಲ ಕೇವಲ ರಾಜಕೀಯಕ್ಕಾಗಿ ಇದನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಮುಸ್ಲಿಮರಿಗೆ ಮಸೀದಿ ಕಟ್ಟಿಸಿ ಕೊಡುತ್ತೇನೆ ಇದನ್ನು ವೈರಲ್ ಮಾಡಬೇಡಿ ಎಂದು ಹೇಳುವ ನೀವು ಇತರರಿಗೆ ನೀತಿ ಪಾಠ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಸರಕಾರ ನಮ್ಮದು ಇದೆ ಎಂದು ಅಧಿಕಾರಿಗಳನ್ನು ಬಳಸಿಕೊಂಡು ನಮ್ಮ ಕಾರ್ಯಕರ್ತರ ಬೆದರಿಸಿದರೆ ಈ ಬೆದರಿಕೆಗೆ ನಾವು ಹೆದರುವುದಿಲ್ಲ ಎಂದರು.

ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಶೆಟ್ಟಿ ಮಾತನಾಡಿ ಬಿಜೆಪಿಯಲ್ಲಿ ತೊಡಗಿಸಿಕೊಂಡವರನ್ನು ವೈಯಕ್ತಿಕವಾಗಿ ಹಾಗೂ ವ್ಯವಹಾರದಲ್ಲಿ ಕಾಂಗ್ರೇಸಿಗರು ತೊಂದರೆ ನೀಡುತ್ತಿದ್ದಾರೆ. ಉದಯ ಶೆಟ್ಟಿ ತಮ್ಮ ರಾಜಕೀಯ ತೆವಲಿಗಾಗಿ ಮಾಧ್ಯಮಗಳ ಮುಂದೆ ದಿನಕ್ಕೊಂದು ಹೇಳಿಕೆ ನೀಡುವ ಕಾಂಗ್ರೇಸ್ ಹೇಳಿಕೆಗಳನ್ನು ಖಂಡಿಸುವುದಾಗಿ ತಿಳಿಸಿದರು.

ಗೋಷ್ಠಿಯಲ್ಲಿ ಬೆಜೆಪಿ ಮಂಡಲ ಅಧ್ಯಕ್ಷ ನವೀನ್ ನಾಯಕ್, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಯೋಗೀಶ್ ಸಾಲಿಯಾನ್, ಕೋಶಾಧಿಕಾರಿ ಗುರುರಾಜ ಮಾಡ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಆತ್ಮಾನಂದ ಶೆಟ್ಟಿ, ಬಿಜೆಪಿ ಯುವಮೋರ್ಚಾ ತಾಲೂಕು ಕಾರ್ಯದರ್ಶಿ ಧನುಷ್ ಆಚಾರ್ಯ, ಮರ್ಣೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಅಭಿನಂದನ್ ಜೈನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News