ಒಡಿಸ್ಸಾದ ಯುವಕ ನಾಪತ್ತೆ

Update: 2024-09-23 16:03 GMT

ಉಡುಪಿ, ಸೆ.23: ಮೂಲತಃ ಒಡಿಸ್ಸಾ ರಾಜ್ಯದ ಮಯೂರ್ಭಂಜ್ ಜಿಲ್ಲೆ ಸುಲಿಯಾಪದ ತಾಲೂಕು ಕದಾಕೋಥಾ ಗ್ರಾಮದ ನಿವಾಸಿ, ಪ್ರಸ್ತುತ ನಗರದ ನಿಟ್ಟೂರಿನ ಬಾಳಿಗ ಫಿಶ್‌ನೆಟ್ ಒಡಿಸ್ಸಾ ಹಾಸ್ಟೆಲ್‌ನಲ್ಲಿ ವಾಸವಿದ್ದ ಬನಮಾಲಿ ನಾಯ್ಕ್ (29) ಎಂಬ ಯುವಕ ಸೆ.12ರಿಂದ ನಾಪತ್ತೆಯಾಗಿದ್ದಾರೆ.

170 ಸೆಂ.ಮೀ. ಎತ್ತರ, ಕೋಲು ಮುಖ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ ಹೊಂದಿದ್ದ ಇವರು, ಹಿಂದಿ ಹಾಗೂ ಓಡಿಯಾ ಭಾಷೆ ಮಾತನಾ ಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News