‘ಎಲ್ಲಾ ಶಾಲಾ-ಕಾಲೇಜು ವಾಹನಗಳಿಗೆ ಬಾಗಿಲು ಅಳವಡಿಸಿ’

Update: 2024-10-04 13:18 GMT

ಬೈಂದೂರು: ಶಾಲಾ-ಕಾಲೇಜುಗಳ ಪ್ರತಿಯೊಂದು ವಾಹನಗಳಿಗೂ ಬಾಗಿಲುಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಹಾಗೂ ಶಾಲಾ ಬಸ್‌ಗಳ ಫುಟ್‌ಬೋರ್ಡ್‌ನಲ್ಲಿ ನಿಲ್ಲಲು ಮಕ್ಕಳಿಗೆ ಅವಕಾಶ ನೀಡದಂತೆ ಶಾಲಾ- ಕಾಲೇಜುಗಳ ವಾಹನಗಳ ಚಾಲಕರಿಗೆ ಪೊಲೀಸರು ಸೂಚನೆಗಳನ್ನು ನೀಡಿದ್ದಾರೆ.

ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಶಾಲೆ-ಕಾಲೇಜುಗಳ ವಾಹನ ಚಾಲಕರ ಸಭೆಯಲ್ಲಿ ಇತ್ತೀಚೆಗೆ ಕರೆದಿದ್ದು, ಸಭೆ ಯಲ್ಲಿ ವಾಹನ ಚಾಲಕರಲ್ಲದೇ ಹಲವು ಶಾಲೆಗಳ ಮುಖ್ಯಸ್ಥರು, ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.

ಪ್ರತಿಯೊಂದು ವಾಹನಗಳಲ್ಲಿ ಕಡ್ಡಾಯವಾಗಿ ಸಿಸಿ ಕೆಮರಾಗಳನ್ನು ಅಳವಡಿಸಬೇಕು. ಚಾಲಕರು ಚಾಲನೆಯ ವೇಳೆ ಮೊಬೈಲ್ ಫೋನ್ ಬಳಸ ಬಾರದು. ಹಾಗೂ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ಸೂಚನೆಗಳನ್ನು ನೀಡಲಾಯಿತು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News